ಮೈಸೂರ:ಕರ್ನಾಟಕವು ಕೂಡ ಪುಣ್ಯ ಜಲಗಳಿರುವ ಭೂಮಿಯಾಗಿದ್ದು, ಇಲ್ಲಿಯೂ ಕೂಡ ಗಂಗಾ ಆರತಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕುಂಭಮೇಳದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾವೇರಿ, ಕಪೀಲಾ ಮತ್ತು ಸ್ಫಟೀಕಾ ಪವಿತ್ರವಾದ ಸಂಗಮ. ತಲಕಾಡಿನ ನಮ್ಮ ಪೂರ್ವಜರ ಪರಂಪರೆಯನ್ನು ಮಠಾಧೀಶರು ಬೆಳೆಸಿಕೊಂಡು ಬಂದಿದ್ದಾರೆ. ಕುಂಭಮೇಳದ ನೀರು ಪವಿತ್ರವಾಗಿದೆ. ಇದನ್ನು ಉಳಿಸಿಬೆಳೆಸಬೇಕು. ನಮ್ಮ ನಾಡಿಯಲ್ಲಿಯೂ ಇಂತಹ ಪವಿತ್ರ ಸ್ಥಳವಿರುವುದು ನಮ್ಮ ಭಾಗ್ಯ. ಈಗಾಗಲೇ ಗಂಗಾ ಆರತಿ ರೀತಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಲಾಗಿದ್ದು, ಇದನ್ನು ಮುಂದುವರೆಸುವ ಅವಶ್ಯಕತೆಯಿದೆ ಎಂದಿದ್ದಾರೆ.
ಇನ್ನು ಉದಯಗಿರಿ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಘಟನೆಯ ಕುರಿತು ಮಾಹಿತಿಯನ್ನು ಪಡೆಯಲಾಗಿದೆ. ಪೊಲೀಸರ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ ಎಂದರು