Breaking News

ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆಫ್ರಿನಾ ಬಳ್ಳಾರಿ.

Spread the love

ಹುಕ್ಕೇರಿ: ಸಾರ್ವಜನಿಕ ಆಸ್ಪತ್ರೆಗೆ ಬೆಳಗಾವಿ ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಹುಕ್ಕೇರಿ ತಾಲೂಕಾ ನೋಡಲ್ ಅಧಿಕಾರಿ ಶ್ರೀಮತಿ ಅಫ್ರೀನಾ ಬಾನು ಬಳ್ಳಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ರಾಜ್ಯ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲನಿ ರಜನೀಶ ಇವರ ವಿಷೇಶ ಆದೇಶದ ಮೇರೆಗೆ ಇಂದು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕಾ ವೈದ್ಯಾಧಿಕಾರಿ ಡಾ, ಉದಯ ಕುಡಚಿ ಮತ್ತು ಮುಖ್ಯ ವೈದ್ಯಾಧಿಕಾರಿ ಮಹಾಂತೇಶ ನರಸನ್ನವರ ಜೋತೆಗೆ ಆರೋಗ್ಯ ಇಲಾಖೆಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ಜರುಗಿಸಿದರು.

ನಂತರ ವಿವಿಧ ವಾರ್ಡುಗಳಿಗೆ ತೇರಳಿ ರೋಗಿಗಳ ಜೋತೆಗೆ ಸಮಾಲೋಚನೆ ಜರುಗಿಸಿ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದು ಈ ಕುರಿತು ರೋಗಿಗಳೊಂದಿಗೆ ಸಮಾಲೋಚನೆ ಮಾಡಿದ್ದೆನೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಮತ್ತು ವೈದ್ಯಾಧಿಕಾರಿಗಳ ಸಮಸ್ಯೆಗಳನ್ನು ಚರ್ಚಿಸಲಾಗಿದೆ, ಹುಕ್ಕೇರಿ ಸರಕಾರಿ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೆ ನೂರಕ್ಕಿಂತಲೂ ಹೇಚ್ಚು ಹೇರಿಗೆ ಆಗುತ್ತಿದ್ದು ಆದರೆ ಕೇವಲ ಒಬ್ಬರೆ ಸ್ತ್ರೀ ರೋಗ ತಜ್ಞರು ಇರುವದರಿಂದ ತೊಂದರೆ ಯಾಗುತ್ತಿದ್ದು ಈ ಕುರಿತು ಸರ್ಕಾರಕ್ಕೆ ವರದಿ ಮಾಡಲಾಗುವದು ಎಂದರು

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ, ಸಂತೋಷ ಕೋಣ್ಣೂರಿ, ದೀಪಕ ಅಂಬಲಿ, ರೀಯಾಜ ಮಕಾನದಾರ, ಎಂ ಸಿ ಬಿಜಾಪೂರೆ, ಈರಣ್ಣಾ ಕಳ್ಳಿ, ವಿನೋದ ಕುಮಾರ, ಶೃತಿ ಅಪ್ಪಣ್ಣವರ, ಅರ್ಚನಾ ಕುಲಕರ್ಣಿ, ಯೂನಸ್ ಬಾಲಪ್ರವೇಶ, ಪ್ರತಗಿ ಬೋರಗಾಂವ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು – ಡಾ, ಉದಯ ಕುಡಚಿ

Spread the love ಹುಕ್ಕೇರಿ : ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು – ಡಾ, ಉದಯ ಕುಡಚಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ