Breaking News

ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಗೋಲ್ಡ್ ಶಾಫ್ ಓನರ್ಸ್ ಮೀಟಿಂಗ್….

Spread the love

ರಾಜ್ಯದಲ್ಲಿ ಇತ್ತೀಚೆಗೆ ನಡೆದ ದರೋಡೆ ಸೇರಿ ಕಳ್ಳತನ ಪ್ರಕರಣಗಳು ಹೆಚ್ಚಳವಾದ ಹಿನ್ನಲೆಯಲ್ಲಿ ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಗೋಲ್ಡ್ ಶಾಫ್ ಓನರ್ಸ್‌ಗಳ ಸಭೆಯನ್ನು ಪೊಲೀಸ ‌ಇಲಾಖೆ ನಡೆಸಿ ನಡೆಸಲಾಯಿತು. ಈ ವೇಳೆ ಶಾಪ್ ಓನರ್ಸಗಳಿಗೆ ಪೊಲೀಸ ಅಧಿಕಾರಿಗಳು ಹಲವು ಸೂಚನೆಗಳನ್ನು ನೀಡಿ, ಎಚ್ಚರಿಕೆಯಿಂದಿರಲು ತಿಳಿಸಿದರು.
ನಗರದ ಗಾಂಧಿಚೌಕ್ ದತ್ತಾತ್ರೇಯ ಮಂದಿರದ ಸಭಾಭವನಲ್ಲಿ ಧಾರವಾಡ ಎಸಿಪಿ ಪ್ರಶಾಂತ. ಸಿದ್ಧನಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ವೇಳೆ ಗೋಲ್ಡ್ ಶಾಫ್ ಓನರ್ಸ್ ‌ಗಳಿಂದ ಶಾಫ ಭದ್ರತೆ ಕೈಗೊಂಡ ಕ್ರಮಗಳ ಕುರಿತು ಪೊಲೀಸ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಎಸಿಪಿ ಪ್ರಶಾಂತ ಸಿದ್ಧನಗೌಡರವರು, ಪ್ರತಿಯೊಂದ ಶಾಪಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು, ಅತೀ ಹೆಚ್ಚು ಗೋಲ್ಡಗಳನ್ನು ಶಾಫ್‌ನಲ್ಲಿ ಇರದತೆ ನೋಡಿಕೊಳ್ಳಬೇಕು.
ಜತೆಗೆ ಶಾಫನಲ್ಲಿ ಕೆಲಸಕ್ಖೆ ತೆಗೆದುಕೊಳ್ಳುವ ಸಿಬ್ಬಂದಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಾಗೂ ಅನುಮಾನಸ್ಪದವಾಗಿ ಯಾರಾದರೂ ಅಂಗಡಿಗೆ ಬಂದಲ್ಲಿ ಎಚ್ಚರಿಕೆಯ ಜತೆಗೆ 112 ಸಹಾಯವಾಣಿ ಸಹಾಯ ಪಡೆದುಕೊಳ್ಳಬೇಕು ಎಂಧು ತಿಳಿಹೇಳಿದರು.
ಇದೇವೇಳೆ ಶಹರ ಪೊಲೀಸ ಠಾಣಾಧಿಕಾರಿ ನಾಗೇಶ ಕಾಡದೇವರಮಠ ಮಾತನಾಡಿ, ಠಾಣೆ ವ್ಯಾಪ್ತಿಯ ಗೋಲ್ಡ ಶಾಪ ಓನರ್ಸಗಳು ಅನುಮಾನಸ್ಪದ ಘಟನೆ ವ್ಯಕ್ತಿಗಳು ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಕರೆ ನೀಡಿದರು. ‌ಇನ್ನೂ ಸಂದರ್ಭದಲ್ಲಿ ಶಹರ ಪೊಲೀಸ ಠಾಣೆಯ ಪಿಎಸ್‌‌ಐ ನದಾಫ್, ಎಸ್‌ಐ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Spread the love

About Laxminews 24x7

Check Also

ರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0.

Spread the loveರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0. ಮಾರ್ಕೆಟ್ ಠಾಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ