ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ ಜಾವಿದ್ ಖಾನ್ ರಿಂದ ಲೋಕಾಯುಕ್ತಕ್ಕೆ ಮನವಿ
ಮಾನ್ವಿ ತಾಲೂಕಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಸತಿ ಶಾಲೆಯಲ್ಲಿ ಸೌಲಭ್ಯಗಳ ಕೊರತೆ
ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಗುಡುಗಿದ ಜಾವಿದ್ ಖಾನ್
ಮಾನ್ವಿ ತಾಲೂಕಿನ ಗ್ರಾಮದ ಇಂದಿರಾ ವಸತಿ ಶಾಲೆಯ ದುರಾಡಳಿತ ಬಗ್ಗೆ ಜಾವಿದ್ ಖಾನ್ ಆಕ್ರೋಶ
ಇಂದಿರಾಗಾಂಧಿ ವಸತಿ ಕುರ್ಡಿ ವಸತಿ ಶಾಲೆಯ ಮಕ್ಕಳಿಗೆ ಸೌಲಭ್ಯ ಕೊರತೆ
ಪರವಾನಗಿ ಇಲ್ಲದ ಕಟ್ಟಡದಲ್ಲಿ ಇಂದಿರಾಗಾಂಧಿ ಕುರ್ಡಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅನಾಹುತವಾದರೆ ಯಾರು ಜವಾಬ್ದಾರಿ
ಮಾನ್ವಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ವಂಚನೆಯ ನಡುವೆ ಬದುಕುತ್ತಿದ್ದಾರೆ.ಇಂದಿರಾಗಾಂಧಿ ಕುರ್ಡಿ ವಸತಿ ಶಾಲೆ ಪರವಾನಗಿ ಇಲ್ಲದೆ ಕಟ್ಟಡ ಇದೆ,ಹೀಗಾಗಿ ಸರಕಾರದ ನಿಯಮಗಳೆ ಮಾನ್ವಿಯಲ್ಲಿ ಗಾಳಿಗೆ ತೂರಲಾಗಿದೆ ಎಂದು ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ ಜಾವಿದ್ ಖಾನ್ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾನ್ವಿ ತಾಲೂಕಿನ ಕುರ್ಡಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸೌಲಭ್ಯಗಳಿಲ್ಲದೆ ಒಂದೇ ಕೊಠಡಿಯಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಕಟ್ಟಡ ಪರವಾನಗಿ ಇಲ್ಲದೆ ಬಿಲ್ಡಿಂಗ್ ನಿರ್ಮಾಣ ಮಾಡಲಾಗಿದೆ.ಆದರೆ ವಿದ್ಯಾರ್ಥಿಗಳಿಗೆ ಅನಾಹುತವಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದಾರೆ.ಆದರೆ ತಾಲೂಕ ಅಧಿಕಾರಿ ನಟರಾಜ ಅವರ ದುರಾಡಳಿತ ಇಲ್ಲಿ ಎದ್ದು ಕಾಣುತ್ತದೆ ಎಂದು ಜಾವಿದ್ ಖಾನ್ ಮಾಧ್ಯಮದವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.