ಗೋಕಾಕ : ಗ್ರಾ.ಪ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿನ್ನೆಯ ಮೇಲೆ ನಡೆಯುವುದಿಲ್ಲ. ಪರೋಕ್ಷವಾಗಿ ಬೆಂಬಲಿತ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಗೋಕಾಕ ನಲ್ಲಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ವಿಶ್ವಾಸ ವ್ಯಕ್ತ ಪಡಿಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಭಾರೀ ತಯಾರಿಗಳು ನಡೆದಿವೆ. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅದೇ ರೀತಿ ಗೋಕಾಕ ತಾಲ್ಲೂಕಿನಲ್ಲಿಯೂ ಸಹ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದರು.
ಇನ್ನೂ ಗೋಕಾಕ ಜಿಲ್ಲೆ ರಚನೆಗೆ ಬಗ್ಗೆ ಪ್ರತಿಕ್ರಿಯಿ, ಗೋಕಾಕ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಾಗಬೇಕು. ಕಳೆದ ನಾಲ್ಕು ದಶಕಗಳಿಂದ ಈ ಬಾಗದ ಒಗ್ಗಟ್ಟಿನ ಹೋರಾಟವಾಗಿದೆ. ಇದು ರಾಜಕೀಯ ಹಿತಾಶಕ್ತಿಗೆ ಪುರಕವಾದ ಹೋರಾಟವಲ್ಲವೆಂದರು.
ಈಗಾಗಲೇ ಸರ್ಕಾರ ಗೋಕಾಕ್ ಜಿಲ್ಲಾ ರಚನೆ ಮಾಡಬೇಕಿತ್ತು. ಈ ಹಿಂದೆ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿ ಇದ್ದಾಗ ಗೋಕಾಕ, ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದರು. ಆ ಆದೇಶವನ್ನು ಸ್ಥಗಿತಗೊಳಿಸುವಂತ ರಾಜಕೀಯ ವ್ಯವಸ್ಥೆ ಅಂದು ನಡೆಯಿತು ಎಂದು ತಿಳಿಸಿದರು.
ಮೈತ್ರಿ ಸರ್ಕಾರವನ್ನೇ ಕೆಡವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಲ್ಲಿ ಒಬ್ಬರಾದ ರಮೇಶ್ ಜಾರಕಿಹೊಳಿ ಅವರು ಪ್ರಭಾವಿ ರಾಜಕೀಯ ನಾಯಕರಾಗಿದ್ದಾರೆ. ಅವರ ಮನಸು ಮಾಡಿದರೆ , ಗೋಕಾಕ್ ಜಿಲ್ಲೆ ಆಗಿಸಬಹುದು ಎಂದರು.