ಬೆಂಗಳೂರು: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಹೇಳಿದರು.
ಮುಡಾ ಹಗರಣದ ಬಗ್ಗೆ ಮಾತಾಡಿದ ಅವರು ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಆಸ್ತಿ ಈಡಿ ಜಪ್ತು ಮಾಡಿದೆ ಅಂತ ಬರುತ್ತಿದೆ? ಅವರ ಆಸ್ತಿ ಜಪ್ತಿ ಆಗಿದೆಯಾ? ಅವರ 3.14 ಎಕರೆ ಜಮೀನು ಬದಲಿಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 50:50 ಅನುಪಾತದಲ್ಲಿ 14 ಸೈಟುಗಳನ್ನು ನೀಡಿದ್ದು ತಪ್ಪು ಅಂತಾದರೆ ಸೈಟು ನೀಡಿದ ಬಿಜೆಪಿಯನ್ನು ಮೊದಲು ಪ್ರಶ್ನೆ ಮಾಡಿ, ಮಾನವೀಯತೆಯ ದೃಷ್ಟಿಯಿಂದ ಸೈಟುಗಳನ್ನು ವಾಪಸ್ಸು ನೀಡಿರುವ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂದ ಅವರು ಮಾಧ್ಯಮದವರನ್ನೇ ಕೇಳಿದರು.