Breaking News

ರೈತರು, ಸರ್ಕಾರದ ಆಸ್ತಿ ಮೇಲೆ ವಕ್ಫ್ ಕಣ್ಣು: ಶ್ರೀರಂಗಪಟ್ಟಣ ಬಂದ್‌ಗೆ ಕರೆ

Spread the love

ಮಂಡ್ಯ, ಜನವರಿ : ವಕ್ಫ್ (waqf) ವಿವಾದ ಸಕ್ಕರಿ ನಗರಿ ‌ಮಂಡ್ಯ ಜಿಲ್ಲೆಯ ಜನರನ್ನ ಬಿಟ್ಟುಬಿಡದೇ ಕಾಡುತ್ತಿದೆ. ರೈತರ ಜಮೀನನ ಆರ್​ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗುತ್ತಿದೆ. ಇದು ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಾಳೆ ಶ್ರೀರಂಗಪಟ್ಟಣ ಬಂದ್‌ಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಂದ್‌ ಆಚರಣೆ ಮಾಡಲಾಗುತ್ತಿದ್ದು, ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.ವಿಶ್ವ ಹಿಂದೂ ಪರಿಷತ್, ಭಜರಂಗದಳ, ದಲಿತ ಸಂಘಟನೆಗಳು, ಕನ್ನಡಪರ, ರೈತ ಸಂಘಟನೆಗಳು ಸೇರಿ ಹಲವು ಸಂಘಟನೆಗಳಿಂದ ಕರೆ ನೀಡಲಾಗಿದೆ. 50ಕ್ಕೂ ಹೆಚ್ಚು ರೈತರ ಆರ್‌ಟಿಸಿಗಳಲ್ಲಿ ವಕ್ಫ್‌ ಹೆಸರು ಉಲ್ಲೇಖಿಸಲಾಗಿದೆ. ರೈತರ ಭೂಮಿ, ಪುರಾತತ್ವ ಇಲಾಖೆಯ ಕಟ್ಟಡಗಳು, ಕೋಟೆ, ಸಾರ್ವಜನಿಕ ಪಾರ್ಕ್‌ಗಳು ಸಾಲದ ಕಾಲಂನಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಭೂ ದಾಖಲೆಗಳಲ್ಲಿ ವಕ್ಫ್ ಹೆಸರು ತೆಗೆಯುವಂತೆ ಆಗ್ರಹಿಸಿ ಬಂದ್​ಗೆ ಕರೆ ನೀಡಲಾಗಿದೆ.

ಸದ್ಯ ವಕ್ಫ್ ವಿವಾದ ಜಿಲ್ಲೆಯ ರೈತರನ್ನ ಬಿಟ್ಟುಬಿಡದೇ ಕಾಡುತ್ತಿದೆ. ಅದರಲ್ಲೂ ಕೋಟೆನಗರಿ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಆತಂಕವನ್ನೇ ಸೃಷ್ಠಿ ಮಾಡಿದೆ. ಆರ್​ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂನಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ. 2014-15 ರಲ್ಲಿ ಈ ರೀತಿ ಉಲ್ಲೇಖವಾಗಿದೆ.

ಕೇವಲ ರೈತರ ಜಮೀನು ಮಾತ್ರವಲ್ಲದೆ ಸರ್ಕಾರಿ ಶಾಲೆ, ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಇನ್ನು ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್​ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಭೂತ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ

Spread the loveಕೊಪ್ಪಳ, ಅಕ್ಟೋಬರ್​ 14: ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Abhinava Gavisiddeshwara Swamiji) ನಡೆದಾಡುವ ದೇವರು ಎಂದೇ ಪ್ರಸಿದ್ದ. ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ