Breaking News

ಅಭಯ ಪಾಟೀಲ ವಿರುದ್ಧ ದೂರು ದಾಖಲಿಸಲು ಕರವೇ ನಿರ್ಧಾರ

Spread the love

ಶಾಸಕ ಅಭಯ ಪಾಟೀಲ ವಿರುದ್ಧ ದೂರು ದಾಖಲಿಸಲು ಕರವೇ ನಿರ್ಧಾರ

ಬೆಳಗಾವಿ- ಕರ್ನಾಟಕ ಸರ್ಕಾರದ ಅನುದಾನವನ್ನು ಖರ್ಚುಮಾಡಿ, ಕನ್ನಡದ ನೆಲದಲ್ಲಿ ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ನಿರ್ಮಿಸಿ,ಕನ್ನಡ ನೆಲದ ಗಣ್ಯರನ್ನು ಕಡೆಗಣಿಸಿ,ಮಹಾರಾಷ್ಟ್ರದಿಂದ ಅತಿಥಿಯನ್ನು ಕರೆಯಿಸಿ ಕನ್ನಡ ನೆಲದಲ್ಲಿ ಅವರಿಂದ ನಾಡವಿರೋಧಿ ಘೋಷಣೆಯನ್ನು ಕೂಗಿಸಿ, ಕನ್ನಡಿಗರನ್ನು ಅವಮಾನಿಸಿದ ಕಾರ್ಯಕ್ರಮದ ಆಯೋಜಕ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ವಿರುದ್ಧ ನಾಡದ್ರೋಹದ ದೂರು ದಾಖಲಿಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.

ಬೆಳಗಾವಿಯ ಅನಿಗೋಳ ಪ್ರದೇಶದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಅನುದಾನದಿಂದ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯನ್ನು ಅನಾವರಣ ಮಾಡಲು ಛತ್ರಪತಿ ಶಿವಾಜಿ ಮಹಾರಾಜರ ವಂಶಜ ಶಿವೇಂದ್ರರಾಜೆ ಭೋಸಲೇ
ಅವರನ್ನು ಆಮಂತ್ರಿಸಿದ್ದು ಅವರು ಕನ್ನಡದ ನೆಲದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ಮೂಲಕ ಕನ್ನಡ ನಾಡಿಗೆ ದ್ರೋಹ ಬಗೆದಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಿದ ಶಾಸಕ ಅಭಯ ಪಾಟೀಲ ಕನ್ನಡದ ನೆಲಕ್ಕೆ ಅಪಮಾನ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಅಧಿಕೃತವಾಗಿ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ಈ ಕಾರ್ಯಕ್ರಮದಲ್ಲೇ ಪುಂಡಾಟಿಕೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೀಪಕ ಗುಡಗನಟ್ಟಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯ ಪರವಾಗಿ ಬಿಜೆಪಿ ಮುಖಂಡರಾದ ಸಿಟಿ ರವಿ ಮತ್ತು ಚಂದ್ರಕಾಂತ ಬೆಲ್ಲದ ಹೇಳಿಕೆ ಕೊಟ್ಟಿದ್ದರು,ಈಗ ಕನ್ನಡದ ನೆಲದಲ್ಲೇ ಕನ್ನಡಿಗರನ್ನು ಅವಮಾನಿಸಿದ್ದು ಈ ಕುರಿತು ಸಿಟಿ ರವಿ ಮತ್ತು ಚಂದ್ರಕಾಂತ ಬೆಲ್ಲದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಇಲ್ಲವಾದಲ್ಲಿ ನಾಡದ್ರೋಹಿ ಕೃತ್ಯವೆಸಗಲು ಅವಕಾಶ ಮಾಡಿಕೊಟ್ಟಿರುವ ಶಾಸಕ ಅಭಯ ಪಾಟೀಲರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಿ ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

 


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ