Breaking News

ಅರಣ್ಯ ಅಪರಾಧಗಳ ನಿರ್ವಹಣೆಗಾಗಿ ಗರುಡಾಕ್ಷಿ ಆನ್​ಲೈನ್ ಎಫ್ಐಆರ್ ತಂತ್ರಾಂಶ ಅಭಿವೃದ್ಧಿ

Spread the love

ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಕಾನೂನು ಚೌಕಟ್ಟನ್ನು ಬಲಪಡಿಸಲು ಗರುಡಾಕ್ಷಿ ಆನ್​​​ಲೈನ್ ಎಫ್​ಐಆರ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದ್ದು, ನಾಳೆ (ಜ.7ರಂದು) ವಿಧಾನಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ.

ಅರಣ್ಯ

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಈ ತಂತ್ರಾಂಶವು ಸಹಕಾರಿಯಾಗಲಿದೆ. ಈಗಾಗಲೇ ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆಯಲ್ಲೂ ಸಹ ಪ್ರಥಮ ವರ್ತಮಾನ ವರದಿಯನ್ನು (ಎಫ್​ಐಆರ್​) ಗಳನ್ನು ಆನ್‌ಲೈನ್‌ ನಲ್ಲಿ/ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವಂತೆ ಸಚಿವ ಈಶ್ವರ್​ ಖಂಡ್ರೆ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ವೈಲ್ಡ್ ಲೈಫ್ ಟ್ರಸ್ಟ್ ಆಫ್​ ಇಂಡಿಯಾ (WTI) ಸಹಯೋಗದೊಂದಿಗೆ ಗರುಡಾಕ್ಷಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಪ್ರಾಯೋಗಿಕವಾಗಿ 5 ವಿಭಾಗಗಳಲ್ಲಿ ಜಾರಿ : ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗತ್ತದೆ. ನಂತರ ಇದನ್ನು ಹಂತ ಹಂತವಾಗಿ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ