ಲೂಯಿ ಬ್ರೈಲ್ ಅವರ 216ನೇ ಜಯಂತಿ; ಕಂಚಿನ ಮೂರ್ತಿ ಅನಾವರಣ …
ಬೆಳಗಾವಿ ಕೊಲ್ಹಾಪುರ ವೃತ್ತಕ್ಕೆ ಲೂಯಿ ಬ್ರೈಲ್ ಹೆಸರಿಡಿ; ಶ್ರೀ ಅಲ್ಲಮಪ್ರಭು ಸ್ವಾಮಿಜೀ ಆಗ್ರಹ
ಲೂಯಿ ಬ್ರೈಲ್ ಅವರ 216ನೇ ಜಯಂತಿ…ಲೂಯಿ ಬ್ರೈಲ್ ಅವರ ಕಂಚಿನ ಮೂರ್ತಿ ಅನಾವರಣಬೆಳಗಾವಿ ಕೊಲ್ಹಾಪುರ ವೃತ್ತಕ್ಕೆ ಲೂಯಿ ಬ್ರೈಲ್ ಹೆಸರಿಡಿಶ್ರೀ ಅಲ್ಲಮಪ್ರಭು ಸ್ವಾಮಿಜೀ ಆಗ್ರಹ
ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ಅವರ 216ನೇ ಜಯಂತಿ ಮತ್ತು ಲೂಯಿ ಬ್ರೈಲ್ ಅವರ ಕಂಚಿನ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆಯಿತು.
ಶನಿವಾರದಂದು ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ಅವರ 216ನೇ ಜಯಂತಿ ಮತ್ತು ಲೂಯಿ ಬ್ರೈಲ್ ಅವರ ಕಂಚಿನ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆಯಿತು. ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್ , ಉಪನ್ಯಾಸಕರಾಗಿ ಬಾಪೂ ಖಾಡೆ ಉಪಸ್ಥಿತರಿದ್ಧರು. ಬಿ.ಡಿ.ಎ.ಬಿ ಅಧ್ಯಕ್ಷರಾದ ವಾದಿರಾಜ್ ಕಲಘಟಗಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ವೇಳೆ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಜೀಗಳು, ತಮ್ಮ ಮನೆಯಲ್ಲೇ ಕಾರ್ಯಕ್ರಮ ನಡೆದಂತಹ ಸಂಭ್ರಮ ನಿಮ್ಮೆಲ್ಲರಲ್ಲಿ ಮನೆ ಮಾಡಿದೆ. 100 ವರ್ಷದ ಹಿಂದೆ ಲೂಯಿ ಅವರು ಮಾಡಿದ ಕ್ರಾಂತಿ ಆದರ್ಶನೀಯ. ಅವರ ಕಾರ್ಯವನ್ನು ತಿಳಿಸಲು ಹಳೆಯ ವಿದ್ಯಾರ್ಥಿಗಳು ಕಂಚಿನ ಮೂರ್ತಿಯನ್ನು ಅನಾವರಣಗೊಳಿಸುತ್ತಿರುವುದು ಪ್ರಶಂಸನೀಯ. ಲೂಯಿ ಅವರ ಕಂಚಿನ ಮೂರ್ತಿ ಕರ್ನಾಟಕದ ಬೆಂಗಳೂರಿನಲ್ಲಿ ಮಾತ್ರ ಇತ್ತು. ಈಗ ಬೆಳಗಾವಿಯಲ್ಲಿ ಎರಡನೇ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದು ಕರ್ನಾಟಕದ ಇತಿಹಾಸದಲ್ಲೇ ನೆನಪಿನಲ್ಲಿಡುವಂತಹ ಸಂಗತಿ ಎಂದರು. ಇದೇ ವೇಳೆ ಲೂಯಿ ಬ್ರೈಲ್ ಅವರ ಹೆಸರನ್ನು ಅಜರಾಮರವಾಗಿಸಲು ನಗರದ ಕೊಲ್ಹಾಪುರ ವೃತ್ತಕ್ಕೆ ಲೂಯಿ ಬ್ರೈಲ್ ಎಂದು ನಾಮಕರಣ ಮಾಡಬೇಕೆಂದು ಶಾಸಕ ಆಸೀಫ್ ಸೇಠ್ ಅವರಿಗೆ ಆಗ್ರಹಿಸಿದರು.
ಈ ವೇಳೆ ಜಯಾನಂದ ಟೋಪೂಗೋಳ, ಡಾ. ಬಸಯ್ಯ ಮಠಪತಿ, ಈರಣ್ಣಾ ಬಡಿಗೇರ, ಶಾರದಾ ನಾಗಮೂತಿ, ಫಕೀರಪ್ಪ ಹುಳ್ಳಿ, ಪ್ರವೀಣ ಭಂಡಾರಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.