Breaking News

ಯುವತಿಯ ಕುಟುಂಬದವರ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿ ಕೊಂಡ?

Spread the love

ಬಳ್ಳಾರಿ: ಯುವತಿ ಮತ್ತವರ ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಭಗ್ನ ಪ್ರೇಮಿಯೊಬ್ಬ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಂಡೂರಿನ ಯಶವಂತನಗರ ಬಳಿ ನಡೆದಿದೆ. ನವೀನ್​ ಕುಮಾರ್‌ ಮೃತ ಭಗ್ನ ಪ್ರೇಮಿ. ಹಲ್ಲೆಯಿಂದ ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಪೆಟ್ಟು ಬಿದ್ದಿದೆ.ASSAULT AND DEATH CASE

ಹೊಸಪೇಟೆ ತಾಲೂಕಿನ ಪಿ.ಕೆ. ಹಳ್ಳಿ ಮೂಲದ ನವೀನ್​ ಕುಮಾರ್‌ ಎಂಬಾತ ಯುವತಿಯನ್ನು ಬಲವಂತದಿಂದ ಕರೆದುಕೊಂಡು ಹೋಗಿ ತಾಳಿ ಕಟ್ಟಿದ್ದು, ನಿನ್ನೆ (ಶುಕ್ರವಾರ) ಮಧ್ಯಾಹ್ನ ಇಲ್ಲಿಗೆ ಬಂದು ಜಗಳ ತೆಗೆದಿದ್ದ. ನಿನ್ನನ್ನು ಮದುವೆ ಆಗಿದ್ದು, ತನ್ನ ಮನೆಗೆ ಬರುವಂತೆ ಯುವತಿಗೆ ಒತ್ತಾಯಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆಂದು ಹಲ್ಲೆಗೊಳಗಾದ ಯುವತಿಯ ಪೋಷಕರು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಮಾಹಿತಿ ನೀಡಿದರು.

ಘಟನೆ ಬಳಿಕ ಆರೋಪಿ ನವೀನಕುಮಾರ್‌ ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಗಾಗಿ ಹುಡುಕುತ್ತಿದ್ದಾಗ ಆತ ಇಂದು ಬೆಳಗ್ಗೆ (ಶನಿವಾರ) ಯಶವಂತನಗರ ಬಳಿಯ ರೈಲ್ವೆ ಹಳಿಯಲ್ಲಿ ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿತು. ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಎಸ್​ಪಿ ತಿಳಿಸಿದರು.

ಘಟನೆ ಬಳಿಕ ಗಂಡಿ ಮಲಿಯಮ್ಮ ದೇಗುಲದ ಬಳಿ ನವೀನ್​ ಕುಮಾರ್​ ತನ್ನ ಕಾರು ಬಿಟ್ಟು ಹೋಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ