ಗೋಕಾಕ : ತಾಲೂಕಿನ ಅನಕ್ಷರಸ್ಥ ಮಹಿಳೆಯರ ಹೆಸರಿನ ಮೇಲೆ ಫೈನಾನ್ಸನವರು ಮೋಸ ಮಾಡಿದ್ದು, ಕಿರುಕುಳ ನೀಡುತ್ತಿದ್ದಾರೆ. ಇಂತಹ ಫೈನಾನ್ಸಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಇಂದು ಬೆಳಗಾವಿ ಜಿಲ್ಲಾದಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ಮಾತನಾಡಿ ಗೋಕಾಕ್ ತಾಲೂಕಿನಲ್ಲಿ ಫೈನಾನ್ಸನವರಿಂದ ಅನಕ್ಷರಸ್ಥರಿಗೆ ಮೋಸ ಮಾಡಿ ಸಾಲ ಪಡೆದು ವಂಚಿಸಿದ್ದಾರೆ. ಬ್ಯಾಂಕಿನವರು ಬಂದು ಮನೆ ಜಪ್ತಿ ಮಾಡಲು ಮುಂದಾಗಿದ್ದು, ದೌರ್ಜನ್ಯವನ್ನು ಎಸಗುತ್ತಿದ್ದಾರೆ. ಬ್ಯಾಂಕಿನವರು ಏಜೆಂಟಗಳ ಮೂಲಕ ಈ ರೀತಿಯ ಮೋಸವನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಅನೀಲ ಶಿಂಗೆ, ವಿ.ಬಿ. ಬಂಬರಗಿ, ಅಡಿವೆಪ್ಪ ಕಮತಗಿ, ಸಣ್ಣಪ್ಪ ಸನದಿ, ಭಾರತಿ ಪಾಟೀಲ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.