Breaking News

ಜನವರಿ 02 2025 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

Spread the love

ಘಟಪ್ರಭಾ: ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜನವರಿ 02 2025 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಪುಣೆಯಿಂದ ಮಧ್ಯಾಹ್ನ 02.15 ಕ್ಕೆ ಹೊರಟು ರಾತ್ರಿ 07.38 ಕ್ಕೆ ಘಟಪ್ರಭಾ ನಿಲ್ದಾಣಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಘಟಪ್ರಭಾ ರೈಲು ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ರೈಲು ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ಜನವರಿ 3 ರಂದು ಹುಬ್ಬಳಿ ನಿಲ್ದಾಣದಿಂದ ಮುಂಜಾನೆ 05.15ಕ್ಕೆ ಹೊರಟು ಮುಂಜಾನೆ 07.23ಕ್ಕೆ ಘಟಪ್ರಭಾ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ವಾರದಲ್ಲಿ ಮೂರು ಬಾರಿ ಹುಬ್ಬಳ್ಳಿಯಿಂದ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ಪುಣೆಯಿಂದ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚರಿಸಲಿದೆ. ಘಟಪ್ರಭಾ ನಿಲ್ದಾಣದಲ್ಲಿ 2 ನಿಮಿಷಗಳ ನಿಲುಗಡೆಯಾಲಿದೆ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟು ಮುಂದೆ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಹಾಗೂ ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ


Spread the love

About Laxminews 24x7

Check Also

ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ

Spread the loveಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ