Breaking News

ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಪಾಲಕರ ವರ್ಕ ಶಾಪ್

Spread the love

ಮಕ್ಕಳ ಪಾಲಕರ ಬಾಂಧವ್ಯ ಗಟ್ಟಿಯಾಗಿರಲಿ ಚೇತನ ಸಂಪ್ರದಾಯ್

ಖ್ಯಾತ ಸಂಪನ್ಮೂಲ ವ್ಯಕ್ತಿ ಚೇತನ ಸಂಪ್ರದಾಯ್ ಮಾತನಾಡಿದರು

ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ
ಪಾಲಕರ ವರ್ಕ ಶಾಪ್ ಸಭೆಯಲ್ಲಿ
ಖ್ಯಾತ ಸಂಪನ್ಮೂಲ ವ್ಯಕ್ತಿ ಚೇತನ ಸಂಪ್ರದಾಯ್ ಅಭಿಪ್ರಾಯ ಪಟ್ಟರು

“ಮಕ್ಕಳು ಮತ್ತು ಪಾಲಕರ ಬಾಂಧವ್ಯ ಯಾವಾಗಲೂ ಗಟ್ಟಿಯಾಗಿರಲಿ ಎಂದು ಚೇತನ ಸಂಪ್ರದಾಯ ಹೇಳಿದರು

ತಂದೆ ತಾಯಿಗಳು ಮತ್ತು ಪಾಲಕರು ಮಕ್ಕಳಿಂದ ದೂರ ಸರಿಯದೇ ಚಿಕ್ಕವರಿದ್ದಾಗಿನ ಬಾಂಧವ್ಯವನ್ನೇ ಮಕ್ಕಳು ಟೀನೇಜ್ ಗೆ ಬಂದಾಗಲೂ
ಮುಂದು ವರೆಸಬೇಕು
ಮಕ್ಕಳ ಮತ್ತು ಪಾಲಕರ ಬಾಂಧವ್ಯ
ನಿರಂತರವಾಗಿ ಗಟ್ಟಿಯಾಗಿರಬೇಕು ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ ಚೇತನ್ ಸಂಪ್ರದಾಯ ಹೇಳಿದರು.

ಅವರು ಇಂದು ಮಾನವಿ ಪಟ್ಟಣದ
ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ
ಹತ್ತನೇ ತರಗತಿ ಮತ್ತು ಪಿಯುಸಿ ವಿಧ್ಯಾರ್ಥಿಗಳ ಪಾಲಕರಿಗೆ ಹಮ್ಮಿಕೊಂಡಿದ್ದ ‘ ವರ್ಕ ಶಾಪ್ ‘ ‌ನಲ್ಲಿ ಮಾತನಾಡಿದರು.

ನಾವೆಲ್ಲರೂ ನಮ್ಮ ಮಕ್ಕಳು ಚಿಕ್ಕವರಿದ್ದಾಗ ತುಂಬಾ ಮುದ್ದಾಗಿ ಬೆಳೇಸುತ್ತೇವೆ ಕಾಲ ಕ್ರಮೇಣ ಅವರಿಂದ್ದ ದೂರ ವಾಗುತ್ತೇವೆ.
ಅವರ ಬೇಕು ಬೇಡಗಳನ್ನು ಪ್ರೀತಿಯಿಂದ ಗಮಮನಿಸುವುದಿಲ್ಲ
ಇದರಿಂದಾಗಿ ಮಕ್ಕಳು ಹೈಸ್ಕೂಲ್ ಮತ್ತು ಕಾಲೇಜಿಗೆ ಬರುವ ವೇಳೆಗೆ ಮೊಬೈಲ್, ಯೂಟ್ಯೂಬ್, ಫೇಸ್‌ಬುಕ್‌ ಇವುಗಳಿಗೆ ಬಲಿಯಾಗುತ್ತಿದ್ದಾರೆ ಅಭ್ಯಾಸದ ಕಡೆಗೆ ಮನಸ್ಸು ಇರುವುದಿಲ್ಲ ಇದನ್ನು ತಪ್ಪಿಸಲು ತಂದೆ ತಾಯಿಯರಾದ ನಾವು ಸಾಧ್ಯವಾದಷ್ಟು ಮಕ್ಕಳಿಗೆ ಹತ್ತಿರವಾಗಿರುವುದೇ ಸೂಕ್ತ ಮಾರ್ಗ ಎಂದು ಚೇತನ ಹೇಳಿದರು .

ಇದ್ದಲ್ಲದೇ ಟಿ.ವಿ.,ಕ್ರಿಕೆಟ್ ಗುಟಕಾ,ವಿಮಲ್ ಅಭ್ಯಾಸ ಜಾಹಿರಾತುಗಳು ನಮ್ಮ ಮಕ್ಕಳ ಮೆದುಳನ್ನು ಆಳುತ್ತಿವೆ ಇದರಿಂದ ಹೊರ ಬರಲು ತಂದೆ ತಾಯಿಯರ ಪ್ರೀತಿಯಿಂದ ಮಾತ್ರ ಸಾಧ್ಯ ಎಂದರು.

ಈ ಪಾಲಕರ ವರ್ಕ ಶಾಪ ಸಭೆಯನ್ನು
ಉದ್ಘಾಟಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯ ಲಕ್ಷ್ಮಿ
ಮಾತನಾಡಿ
ನಮ್ಮ ಸಂಸ್ಥೆ ಅತ್ಯುತ್ತಮ ಶಿಕ್ಷಣಕ್ಕೆ ಹೆಸರಾಗಿದೆ. ಎಲ್ಲಾ ಸೌಲತ್ತುಗಳು ಇಲ್ಲಿವೆ ಇದರೊಂದಗೆ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಇನ್ನೂ ಉತ್ತಮ ಕಲಿಕೆ ಸಾಧ್ಯವಾಗುತ್ತದೆ ಮಕ್ಕಳು ಭವಿಷ್ಯ ಉಜ್ವಲವಾಗುತ್ತದೆ. ಎನ್ನುವ ಉದ್ದೇಶಕ್ಕಾಗಿ ಈ ಪಾಲಕರ ವರ್ಕ ಶಾಪ್ ಆಯೋಜಿಸಿದ್ದೇವೆ ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ನರಸಿಂಹ ವಹಿಸಿದ್ದರು ಈ ಸಂಧರ್ಭದಲ್ಲಿ ಸಹ ಕಾರ್ಯದರ್ಶಿ ಕೆ.ರಾಜಾ ರವಿವರ್ಮ ,ಮಖ್ಯ ಗುರುಗಳಾದ ಅನೀಸ್ ಫಾತಿಮಾ ಮೇಡಂ ,ಬಸವರಾಜ ,ರಹೀಪಾಶಾ,ಉಪಸ್ಥಿತರಿದ್ದರು
ಶಿಕ್ಷಕಿ ಸುಪ್ರಿಯಾ ನಿರೂಪಿಸಿದರೆ ಅರ್ಚನ ಪ್ರಾರ್ಥಿಸಿರು ಹತ್ತನೇ ಮತ್ತು ದ್ವೀತಿಯ ಪಿಯುಸಿ ವಿಧ್ಯಾರ್ಥಿಗಳ 186 ಹೆಚ್ಚು ಸಂಖೆಯಲ್ಲಿ ಪಾಲಕರು ಈ ವರ್ಕ ಶಾಪ್ ನಲ್ಲಿ ಪಾಲ್ಗೊಂಡಿದ್ದರು

ಬೆಳ್ಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ. 1:30 ರ ವರೆಗೆ ನಡಿದ ಈ ಸಭೆಯಲ್ಲಿ ಪಾಲಕರು ತುಂಬಾ ಆಸಕ್ತಿ ಖುಷಿಯಿಂದ ಭಾಗವಹಿಸಿ
ಚರ್ಚೆಯ ಸಮಯದಲ್ಲಿ
ಪ್ರಶ್ನೆಗಳನ್ನು ಕೇಳುತ್ತಾ ಸ್ಪಂದಿಸಿದ್ದು
ಈ ಕಾರ್ಯಕ್ರಮದ ವಿಶೇಷವಾಗಿ ಕಂಡು ಬಂತು.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ