ವಿಜಯಪುರ, ಡಿಸೆಂಬರ್ 27: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯಲ್ಲಿ (Waqf Board) ಮನಬಂದಂತೆ ಪೆಟ್ರೋಲ್ ಇಂಡೆಂಟ್ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಸರ್ಕಾರದ ಎಲ್ಲ ಇಲಾಖೆಗಳಿಗೂ ಇಂಧನ ಮಿತಿ ಮಾರ್ಗಸೂಚಿ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ಯತ್ನಾಳ್ ಬರೆದ ಪತ್ರದಲ್ಲಿ ಏನಿದೆ?
ರಾಜ್ಯದ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯುತವಾಗಿ, ರಾಜ್ಯದ ಕಲ್ಯಾಣಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ, ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರ, ರೈತರ ಶ್ರೇಯೋಭಿವೃದ್ಧಿಗೆ, ಮಹಿಳಾ ಸಬಲೀಕರಣ ಉಪಯೋಗಿಸಬೇಕು. ಆದರೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ.
ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು ಹಾಗೂ ಇಲಾಖೆಯ ಮುಖ್ಯಸ್ಥರ ಸಹಿ ಇರಬೇಕು. ಆದರೆ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಅವರ ವಾಹನ ಸಂ KA 01 GB 9990 ಗೆ ಇಂಡೆಂಟ್ ಗಳು ಇಲ್ಲದಿದ್ದರೂ ವೆಟ್ರೋಲ್ ತುಂಬಿಸಲಾಗಿರುವುದನ್ನು ಮಾಧ್ಯಮಗಳು ದಾಖಲೆ ಸಮೇತ ಬಯಲು ಮಾಡಿವೆ. ಕೇವಲ ಐದು ತಿಂಗಳಲ್ಲಿ ಈ ವಾಹನಕ್ಕೆ 390 ಲೀಟರ್ ವೆಟ್ರೋಲ್ ತುಂಬಿಸಲಾಗಿದೆ. ಚಾಲಕ ಮಹೇಶ್ ಎನ್ ಎಂಬುವವರು 2023 ಡಿಸೆಂಬರ್, 2024 ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಮೇ ತಿಂಗಳ ಇಂಧನನಿಂದ ಬಿಲ್ಗಳಲ್ಲಿ ವ್ಯತ್ಯಯ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮವೊಂದು ಬಿಡುಗಡೆ ಮಾಡಿರುವ ದಾಖಲೆಯನ್ನು ಈ ಪತ್ರದ ಮೂಲಕ ಲಗತ್ತಿರಿಸುತ್ತೇನೆ.