Breaking News

ನೆಲಮಂಗಲ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಒಂದೇ ಕುಟುಂಬದ ಆರು ಜನರ ದುರಂತ ಅಂತ್ಯವಾಗಿದೆ.

Spread the love

ವಿಜಯಪುರ: ಸಾಮಾನ್ಯ ಕುಟುಂಬದ ಯುವಕ ಎಂಜಿನಿಯರಿಂಗ್​ ಪದವಿ ಪಡೆದು ಬೆಂಗಳೂರಿಗೆ ಬಂದು ಹಂತ ಹಂತವಾಗಿ ಮೇಲಕ್ಕೇರಿದ್ದರು. ಅಷ್ಟೇ ಅಲ್ಲ, ಸ್ವಂತ ಕಂಪನಿಯನ್ನೂ ಕಟ್ಟಿ ನೂರಾರು ಜನಕ್ಕೆ ಉದ್ಯೋಗವನ್ನೂ ನೀಡಿ ಯಶಸ್ವಿಯಾಗಿದ್ದರು. ಹಳ್ಳಿಯಲ್ಲಿದ್ದ ಪೋಷಕರು, ಸಂಬಂಧಿಕರಿಗೆ ಆಸರೆ ಆಗಿದ್ದರು. ಆದರೆ ವಿಧಿಯಾಟಕ್ಕೆ ಉದ್ಯಮಿ ಮತ್ತು ಇಡೀ ಕುಟುಂಬವೇ ಬಲಿಯಾಗಿದೆ.

ನೆಲಮಂಗಲ ಬಳಿ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಬಲಿಯಾದ ಉದ್ಯಮಿ ಚಂದ್ರು ಯಾಗಪ್ಪಗೋಳ ಮತ್ತು ಇಡೀ ಕುಟುಂಬದ ಕರುಣಾಜನಕ ಕಥೆ ಇದು. ಚಂದ್ರು ಯಾಗಪ್ಪಗೋಳ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಮೊರಬಗಿ ಗ್ರಾಮದವರು.

ಸದ್ಯ ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​​ನಲ್ಲಿ ವಾಸವಾಗಿದ್ದರು. ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ಚಂದ್ರು ಯಾಗಪ್ಪಗೋಳ ಅವರು ಪತ್ನಿ, ಇಬ್ಬರು ಮಕ್ಕಳು ಸೇರಿ ಕುಟುಂಬದ ಆರು ಜನರು ಸ್ವಗ್ರಾಮಕ್ಕೆ ತಮ್ಮ ವೋಲ್ವೋ ಕಾರಿನಲ್ಲಿ ತೆರಳುವಾಗ ಯಮನಂತೆ ಕಂಟೇನರ್ ಎದುರಾಗಿದೆ. ಕಾರಲ್ಲಿದ್ದ ಚಂದ್ರು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಸಹೋದರನ ಪತ್ನಿ, ಅವರ ಮಗ ಸೇರಿ ಆರು ಜನ ಸಾವನ್ನಪ್ಪಿದ್ದಾರೆ.

ಸ್ವಂತ ಉದ್ಯಮಿ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ: ಸ್ವಗ್ರಾಮಕ್ಕೆ ತೆರಳುವಾಗ ಇಡೀ ಕುಟುಂಬ ದುರಂತ ಅಂತ್ಯ

ಚಂದ್ರು ಯಾಗಪ್ಪಗೋಳ (48), ಪತ್ನಿ ಗೌರಾಬಾಯಿ (42), ಧೀಕ್ಷಾ (12), ಜಾನ್ (16), ಆರ್ಯ (6) ಮತ್ತು ವಿಜಯಲಕ್ಷ್ಮಿ (36) ಮೃತಪಟ್ಟವರು.ನೂರಾರೂ ಜನರಿಗೆ ಉದ್ಯೋಗದಾತ: ಚಂದ್ರು ಯಾಗಪ್ಪಗೋಳ 2004ರಲ್ಲಿ ಸೂರತ್​ಕಲ್ ಎನ್​ಐಟಿಯಿಂದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್​ ನಲ್ಲಿ ಪದವಿ ಪಡೆದು, ಡಿಸೈನರ್ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ದರು. ಬಳಿಕ ಬೋಸ್, ಕೆಪಿಐಟಿ ಟೆಕ್ನಾಲಜಿಯಲ್ಲೂ ಸೇವೆ ಸಲ್ಲಿಸಿದ್ದರು. ನಂತರ 2018ರಲ್ಲಿ ಚೀನಾಗೆ ತೆರಳಿ ಗ್ರೇಟ್ ವಾಲ್ ಮೋಟಾರ್ ಕಂಪನಿಯ ಮುಖ್ಯ ಇಂಜನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಅದೇ ವರ್ಷ ವಾಪಸ್ ಬೆಂಗಳೂರಿಗೆ ಬಂದ ಅವರು, ಪತ್ನಿ ಗೌರಾಬಾಯಿ ಜೊತೆ ಸೇರಿ ಇಲ್ಲಿನ ಹೆಚ್​​ಎಸ್​ಆರ್ ಲೇಔಟ್​ನಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆರಂಭಿಸಿದ್ದರು. ಕೇವಲ ಐವರು ಇಂಜಿನಿಯರ್​​ಗಳಿಂದ ಶುರು ಮಾಡಿದ ಸಂಸ್ಥೆಯಲ್ಲಿ ಇದೀಗ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಕೊಟ್ಟಿದ್ದಾರೆ. ಇತ್ತೀಚಿಗೆ ಕಂಪನಿಯ ಹೊಸ ಕಚೇರಿ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.


Spread the love

About Laxminews 24x7

Check Also

ಸಿ. ಟಿ ರವಿ ಘಟನೆ ಆಗಿ ಹೋಗಿದೆ. ಮತ್ತೆ ಅದನ್ನು ಮುಂದುವರಿಸುವುದರಲ್ಲಿ ಅರ್ಥ‌ ಇಲ್ಲ”:ಸತೀಶ ಜಾರಕಿಹೊಳಿ

Spread the loveಬೆಳಗಾವಿ: ವಿಧಾನಪರಿಷತ್ ಸದಸ್ಯ ಸಿ. ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣದ ಕುರಿತು ಜಿಲ್ಲಾ ಉಸ್ತುವಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ