ಧಾರವಾಡ ಉಪನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚಾರಣೆಯನ್ನು ಆಚರಣೆ ಮಾಡಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಅಪರಾಧಗಳ ಸೇರಿ ಕಾನೂನು ಕುರಿತು ಪೊಲೀಸ್ ಅಧಿಕಾರಿಗಳು ತಿಳಿವಳಿಕೆ ನೀಡಿದರು.
ಉಪನಗರ ಪೊಲೀಸ ಠಾಣೆ ವ್ಯಾಪಿಯ ನಗರದ ಮದೀನಾ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ನಡೆದಿದ್ದು, ಎಸಿಪಿ ಪ್ರಶಾಂತ ಸಿದ್ಧಗೌಡರವರು ವಿದ್ಯಾರ್ಥಿಗಳಿಗೆ ಅಪರಾಧ ಸೇರಿ ಕಾನೂನುಗಳ ಕುರಿತು ತಿಳುವಳಿಕೆ ನೀಡುವ ಮೂಲಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಕರೆ ನೀಡಿದರು.
ಅಲ್ಲದೆ ಇದೇ ವೇಳೆ ಮಾದಕ ವ್ಯಸನದಿಂದಾಗುವ ಆರೋಗ್ಯ ಹಾನಿ ಸೇರಿ ನೆಮ್ಮದಿಯಿಂದಾಗುವ ಅನಾಹುತಗಳ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಇನ್ನೂ ಸಂದರ್ಭದಲ್ಲಿ ಉಪನಗರ ಪೊಲೀಸ್ ಠಾಣೆಯ ಸಿಪಿಐ ಪ್ರಭು ಗಂಗೆನಹಳ್ಳಿ. ಎಎಸ್ ಐ ಸೇರಿ ಠಾಣೆಯ ಸಿಬ್ಬಂದಿಗಳು ಹಾಗೂ ಕಾಲೇಜು ಶಿಕ್ಷಕರು ಉಪಸ್ಥಿತರಿದ್ದರು.