Breaking News

ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ, ಬಿಜೆಪಿ, ಆರ್‌ಎಸ್‌ಎಸ್​​ನವರು: ಕಾಶಪ್ಪನವರ್​ ಹೊಸ ಬಾಂಬ್

Spread the love

ಬೆಳಗಾವಿ, ಡಿಸೆಂಬರ್​ 12: 2ಎ ಮೀಸಲಾತಿಗಾಗಿ (Panchamasali reservation) ಹೋರಾಟ ಮಾಡುತ್ತಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸದ್ಯ ಸದನದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಬಿಜೆಪಿ ನಾಯಕರು ಇದನ್ನೇ ಅಸ್ತ್ರವಾಗಿಸಿಕೊಂಡಿದ್ದು, ಆಡಳಿತಾರೂಢ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಅದೇ ಸಮುದಾಯದ ಶಾಸಕ ವಿಜಯಾನಂದ ಕಾಶಪ್ಪನವರ್,​ ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್​ನವರು ಎಂದು ಹೊಸ ಬಾಂಬ್​ ಹಾಕಿದ್ದಾರೆ.

ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ್

ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್​, ನಮ್ಮ ಸಮಾಜದ ಅಮಾಯಕರ ಮೇಲೆ ಲಾಠಿ ಚಾರ್ಕ್ ಮಾಡುವ ಹಾಗಾಯಿತು. ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್​​ನವರು. ಪೊಲೀಸರ ಮೇಲೆ ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ. ಸಮಾಜವನ್ನ ಕಟ್ಟುವ ಕೆಲಸ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸ್ವಾಮೀಜಿಗೆ ಗೌರವ ಕೊಡುತ್ತೇನೆ. 712 ಕಿ.ಮೀ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ಒಂದಾದರೂ ಗಲಾಟೆ ಆಯ್ತಾ? ಉದ್ದೇಶ ಪೂರ್ವಕವಾಗಿ ಈಗ ಗಲಾಟೆ ಮಾಡಿಸಿದ್ದಾರೆ. ಗಾಯಾಳುಗಳನ್ನ ಯಾರು ನೋಡಿಕೊಳ್ಳುತ್ತಾರೆ. ಸ್ವಾಮೀಜಿ ನೋಡ್ಕೋತಾರ? ಮುಖಂಡರು ನೋಡಿಕೊಳ್ಳುತ್ತಾರಾ? ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಅದನ್ನ ತೆಗೆಯಬೇಕು. ಸ್ವಾಮೀಜಿ ತೀರ್ಮಾನ ಒಂದೇ ಅಲ್ಲಾ ಸಮಾಜ ಇದೆ. ನಾವು 12 ಜನ ಶಾಸಕರು ಇದ್ದೇವೆ. ಬಿಜೆಪಿ ಪಾರ್ಟಿಯ ವೇದಿಕೆಗೆ ಹೋಗಿ ಭಾಷಣ ಮಾಡುತ್ತಾರೆ. ನಾವು ಮೀಸಲಾತಿ ಕೊಡಿಸುತ್ತೇವೆ ಎಂದಿದ್ದಾರೆ.

ಸಂವಿಧಾನ ವಿರೋಧಿ ಆಗುತ್ತೆ ಎನ್ನುವ ಸಿಎಂ‌ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇದೆ. ಹೇಗೆ ಸಿಎಂ ಕೊಡುವುದಕ್ಕೆ ಆಗುತ್ತೆ. ಸಿಎಂ‌ ಸುಗ್ರಿವಾಜ್ಞೆ ಹೋರಡಿಸಲು ಆಗುವುದಿಲ್ಲ. ನಾನು ಸದನದಲ್ಲಿ ಮಾತಾಡಿದರೆ, ಸಭಾಪತಿಗಳ ಮೇಲೆ ಹಲ್ಲೆ ಮಾಡಲು ಬಿಜೆಪಿಯವರು ಹೋಗಿದ್ದಾರೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಮಣ್ಣಿನ ಆರೋಗ್ಯ ಮತ್ತುನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಸಿಎಂಸಿದ್ದರಾಮಯ್ಯ ಚಾಲನೆ

Spread the loveಬೆಳಗಾವಿ: ನಮ್ಮದು ರೈತ ಪರ ಸರ್ಕಾರ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ