ಬೆಳಗಾವಿ : ಹನಿ ಟ್ರ್ಯಾಪ್ ಮಾಡಿ ಬ್ಲ್ಯಾಕ್ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಮೂಡಲಗಿ ಪುರಸಭೆಯ ಸದಸ್ಯನೋರ್ವನಿಗೆ ಹನಿ ಕುಡಿಸಿ ಮನಿ ಪೀಕುತ್ತಿದ್ದವರು ಕಂಬಿ ಎಣಿಸುತ್ತಿದ್ದಾರೆ.
9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಹಣಕ್ಕಾಗಿ ಪಟ್ಟಣದ ಪುರಸಭೆಯ ಸದಸ್ಯನೋರ್ವನಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪಿಗಳಾದ ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಕಳಿಸಿದ್ದಾರೆ.
ಪರಪುರುಷ ಮಹಿಳೆ ಇರುವ ರೂಮ್ ಗೆ ಹೋಗಿ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪುರಸಭೆ ಸದಸ್ಯನ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಮತ್ತೆ ಒಂದು ಲಕ್ಷ ನೀಡುವಂತೆ ಒತ್ತಾಯಿಸಿದ್ದಕ್ಕಾಗಿ ಮನನೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.7ರಂದು ದೂರು ದಾಖಲಿಸಿದ್ದ.
ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ ವೇಳೆ ಹಣಕ್ಕಾಗಿ ಹಾಗೂ ಈ ಕೃತ್ಯ ಮಾಡಲು ಓರ್ವ ವ್ಯಕ್ತಿ ಮಾರ್ಗದರ್ಶನ ನೀಡಿದ್ದಾನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಅವನ ಹೇಳಿಕೆಯಂತೆ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಹನಿ ಟ್ರ್ಯಾಪ್ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇನ್ನು ಹನಿ ಟ್ರ್ಯಾಪ್ ದಲ್ಲಿ ಭಾಗಿಯಾದ ಮಹಿಳೆಯ ಬಳಿ ಬೇರೆ ಬೇರೆ ವ್ಯಕ್ತಿಗಳ ವಿಡಿಯೋ ಇವೆ ಹಾಗೂ ಈ ಹನಿ ಟ್ರ್ಯಾಪ್ ಗ್ಯಾಂಗ್ ಈ ಮುಂಚೆ ಓರ್ವ ಅಧಿಕಾರಿಗೆ ಬಲೆ ಬೀಸಿದ್ದರು, ಆ ಅಧಿಕಾರಿ ಬದಲಿಗೆ ಸದಸ್ಯ ಬಿದ್ದಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಇದೆ.