Breaking News

ಪಂಚಮಸಾಲಿ ಹೋರಾಟದಲ್ಲಿ ಯಾವುದೇ ಗೊಂದಲವಿಲ್ಲ: ಮೊಹಮ್ಮದ್ ರೋಷನ್

Spread the love

ಬೆಳಗಾವಿ, ಡಿಸೆಂಬರ್​​ 09: ಡಿ. 10 ರಂದು ಶಕ್ತಿಸೌಧಕ್ಕೆ ಟ್ರ್ಯಾಕ್ಟರ್​ ಮೂಲಕ ಮುತ್ತಿಗೆ ಹಾಕಲು ಪಂಚಮಸಾಲಿ (Panchmasali) ಸಮುದಾಯ ಸಿದ್ಧವಾಗಿದ್ದಾಗಲೇ ಸರ್ಕಾರ ಹೋರಾಟದ ವಾಹನಗಳು ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿತ್ತು.

ಈ ವಿಚಾರ ಅಧಿವೇಶನದ ಒಳಗೂ ಮತ್ತು ಹೊರಗೂ ಸದ್ದು ಮಾಡಿದೆ. ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಗುಡುಗಿದರೆ, ಇತ್ತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಡಿಸಿ, ಪೊಲೀಸ್ ಕಮಿಷನರ್ ಜೊತೆಗೆ ಸಭೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.

ಬಳಿಕ ನಾಳೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಲಾಗಿದೆ.ಪಂಚಮಸಾಲಿ ಹೋರಾಟದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಜಿಲ್ಲಾಡಳಿತಕ್ಕೆ ಎಷ್ಟು ಜನ ಬರುತ್ತಾರೆ, ಎಲ್ಲಿ ಅವರನ್ನ ಕೂಡಿಸಬೇಕು ಎನ್ನುವುದು ಕ್ಲಿಯರ್ ಇರಲಿಲ್ಲ.

ಜನಸಾಗರ ಸೇರುವಾಗ ಯಾವುದೇ ತೊಂದರೆ ಆಗಬಾರದೆಂದು ಇಂದು ಶಾಂತ ರೀತಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಟ್ರ್ಯಾಕ್ಟರ್ ಬೇಡ ಅಂದಿದ್ದಕ್ಕೆ ಸ್ವಾಮೀಜಿ ಅವರು ಒಪ್ಪಿಕೊಂಡಿದ್ದಾರೆ. ಇನ್ನೂಳಿದಂತೆ ಕ್ರೂಸರ್ ಸೇರಿ ಬೇರೆ ವಾಹನದಲ್ಲಿ ಬರಬಹುದು. ನಾವು ಅನುಮತಿ ಕೊಟ್ಟಿದ್ದೇವೆ ಜಾಗ ಫೈನಲ್ ಆಗಿದೆ ಎಂದಿದ್ದಾರೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ