ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ಕನಸಿನ ಯೋಜನೆ ಹಿರಿಯ ನಾಗರಿಕರ ಮನೋರಂಜನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ನಿಸರ್ಗರಮ್ಯ ಬ್ಯಾಕ್ಸಿನ್ ಡಿಪೋ ದ ಆರೋಗ್ಯ ಇಲಾಖೆ ಕಾರ್ಯಾಲಯದ ಹಿಂದುಗಡೆ ಶಾಸಕ ಅಭಯ ಪಾಟೀಲ್ ಅವರ ಕನಸಿನ ಯೋಜನೆ ಹಿರಿಯ ನಾಗರಿಕರ ಮನೋರಂಜನ ಕೇಂದ್ರವನ್ನ ಇಂದು ಉದ್ಘಾಟನೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಉಪಮಹಾಪೌರ ಆನಂದ್ ಚೌಹಾಣ್ ಅವರ ಮಾತನಾಡಿ ಶಾಸಕ ಅಭಯ್ ಪಾಟೀಲ್ ಅವರ ಕಾರ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಭಾರತದಲ್ಲಿ ಎಲ್ಲೂ ಇಲ್ಲದ ಹಿರಿಯ ನಾಗರಿಕರ ಮನೋರಂಜನ ಕೇಂದ್ರವನ್ನ ಬೆಳಗಾವಿ ದಕ್ಷಿಣದಲ್ಲಿ ಆರಂಭಿಸಲಾಗಿದೆ. ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇನ್ನೂ ರಾಮ ಭಂಡಾರಿ ಅವರು ಶಾಸಕ ಅಭಯ್ ಪಾಟೀಲ್ ಅವರು ಹಿರಿಯ ನಾಗರಿಕರಿಗಾಗಿ ದೇಶದಲ್ಲಿ ಮಾದರಿಯಾದ ಮನೋರಂಜನ ಕೇಂದ್ರವನ್ನ ಆರಂಭಿಸಿದ್ದಾರೆ. ವ್ಯಾಕ್ಸಿನ್ ಡಿಪೋದಲ್ಲಿ ಇಂತಹ ಅನೇಕ ಅಭಿವೃದ್ಧಿಗಳನ್ನು ಕೈಗೊಳ್ಳಲಾಗಿದೆ. ಕೆಲ ಜನರು ಅವುಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗೂಡಿ ಮುಂದೆ ಆಗಬೇಕೆಂದು ಕರೆ ನೀಡಿದರು.
ಇನ್ನೂ ಚಂದ್ರಶೇಖರ್ ಬೆಂಬಳಗಿಯವರು ವ್ಯಾಕ್ಸಿಂಗ್ ಡಿಪೋದಲ್ಲಿ ಅರ್ಧಕ್ಕೆ ನಿಂತ ಉದ್ಯಾನ ಕಾಮಗಾರಿಯನ್ನ ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ ಮಾಡಬೇಕು.
ಮಕ್ಕಳಿಗೆ ಅನುಕೂಲವಾಗುವಂತೆ ನಿರ್ಮಿಸಿದ ಉದ್ಯಾನವನವನ್ನ ಸಂಪೂರ್ಣಗೊಳಿಸಲು ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.