ಇಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಅಧಿವೇಶನದ ಪೂರ್ವಭಾವಿ ಸಿದ್ಧತೆಯ ಪರಿಶೀಲನೆಗೆ ಆಗಮಿಸಿದ್ದ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಭೀಮಪ್ಪ ಗಡಾದ ಅವರು ಬೆಳಗಾವಿಯನ್ನು ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಘೋಷಿಸುವುದರ ಜೊತೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿ ಮತ್ತು ನಿರ್ದೇಶಕ ಮಟ್ಟದ ಕಾರ್ಯಾಲಯಗಳನ್ನು ವರ್ಗಾಯಿಸುವ ಮೂಲಕ ಸುವರ್ಣ ಸೌಧವನ್ನು ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರವನ್ನಾಗಿಸಬೇಕೆಂದು ಒತ್ತಾಯಿಸಿದರು. ಹಾಗೂ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಈ ನಿರ್ಣಯ ಅತ್ಯಂತ ಅವಶ್ಯಕವಾಗಿದೆ ಎಂದು ಅವರಲ್ಲಿ ವಿನಂತಿಸಿ ಈ ಕುರಿತು ಸರ್ಕಾರದ ಗಮನ ಸೆಳೆಯಲು ವಿನಂತಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ. ಅರ್ಜುನ ಪಂಗನ್ನವರ, ಜನಪರ ಹೋರಾಟಗಾರ ದಸ್ತಗೀರ ಪೈಲ್ವಾನ, ಆಲಂ ನದಾಫ, ಸಂಜಯ ಪೂಜಾರಿ, ರಿಯಾಜ್ ಪಟಾದಾರ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಶಿರಸಂಗಿ, ದಾನೇಶ ಹಿರೇಮಠ, ಸಲಾಂ ಬೆಟಗೇರಿ ಮುಂತಾದ ಗಣ್ಯರು ನಿಯೋಗದಲ್ಲಿ ಉಪಸ್ಥಿತರಿದ್ದರು.
