Breaking News

ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ

Spread the love

ಡಿಸೆಂಬರ್​ 02: ಕಿಮೀಗೆ ಇಂತಿಷ್ಟೇ ದರವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಕರ್ನಾಟಕ ಸಾರಿಗೆ ಇಲಾಖೆ (Karnataka Transport) ಓಲಾ (Ola), ಊಬರ್ (Ubar)​ ಆಟೋಗಳಿಗೆ ದರ ನಿಗದಿ ಮಾಡಿದೆ. ಆದರೆ, ಈ ನಿಯಮವನ್ನು ಮೀರಿ ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ.

ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ಆರ್​ಟಿಒ ರೂಲ್ಸ್ ಪ್ರಕಾರ ಆಟೋದಲ್ಲಿ ಎರಡು ಕಿಮೀಗೆ ಮಿನಿಮಮ್ ಚಾರ್ಜ್ 30 ರುಪಾಯಿ ನಂತರದ ಕಿಮೀಗೆ 15 ರೂಪಾಯಿ ಪಡೆದುಕೊಳ್ಳಬೇಕು.

ಆದರೆ, ಈ ಅಗ್ರಿಗೇಟರ್ ಕಂಪನಿಗಳು ಮಳೆ ಬರುತ್ತಿರುವ ಸಮಯದಲ್ಲಿ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ಒನ್ ಟು ಡಬಲ್ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿವೆ. ಇದಕ್ಕೆ ಬ್ರೇಕ್ ಹಾಕಲು ನಿರಂಜನ್ ಮತ್ತು ಶಿವು ಎಂಬ ಇಬ್ಬರು ಯುವಕರು ಸೇರಿ ಮೀಟರ್ ಆ್ಯಪ್ ಸೃಷ್ಟಿಸಿದ್ದಾರೆ. ಆಟೋ ಮತ್ತು ಕ್ಯಾಬ್​ ಚಾಲಕರು ಮೀಟರ್ ಹಾಕಿಕೊಂಡು ಡ್ಯೂಟಿ ಮಾಡಬಹದು.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ