Breaking News

ಬಾಲಕಿ ಮೇಲೆ ದೈಹಿಕ ಶಿಕ್ಷಕನಿಂದ ಅತ್ಯಾಚಾರ,

Spread the love

ನವೆಂಬರ್​ : 17 ವರ್ಷದ ಬಾಲಕಿ (Girl) ಮೇಲೆ ಬಲವಂತವಾಗಿ ದೈಹಿಕ ಶಿಕ್ಷಕನಿಂದ ಅತ್ಯಾಚಾರ ಎಸಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆನಲ್ಲಿ ನಡೆದಿದೆ. 22 ವರ್ಷದ ದೈಹಿಕ ಶಿಕ್ಷಕ ದಾದಾಪೀರ್​ನಿಂದ ಅತ್ಯಾಚಾರ ಮಾಡಲಾಗಿದೆ. ಸಂತ್ರಸ್ತೆ ದೂರು ಆಧರಿಸಿ ದೈಹಿಕ ಶಿಕ್ಷಕನ ಬಂಧಿಸಲಾಗಿದೆ. ದಾಬಸ್​ಪೇಟೆ ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ದೈಹಿಕ ಶಿಕ್ಷಕ ದಾದಾಪೀರ್​ ಬಾಲಕಿಯನ್ನು ನಂಬಿಸಿ ದೇವರಾಯನ ದುರ್ಗ ಬೆಟ್ಟಕ್ಕೆ ಕರೆದೊಯ್ದಿದ್ದ. ನಂತರ ತುಮಕೂರಿಗೆ ಕರೆದೊಯ್ದು ಲಾಡ್ಜ್​​ವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. 10 ದಿನದ ನಂತರ ಮತ್ತೆ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಬಾಯಿಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದ.

ಮದುವೆ ಆಗುವುದಾಗಿ ನಂಬಿಸಿ ಲವ್, ಸೆಕ್ಸ್, ದೋಖಾ

ಮತ್ತೊಂದು ಪ್ರಕರಣದಲ್ಲಿ ಮದುವೆ ಆಗುವುದಾಗಿ 24 ವರ್ಷದ ದಲಿತ ಯುವತಿಯನ್ನು ನಂಬಿಸಿ ಅತ್ಯಾಚಾರ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಕಾಂತ್​ ಬಂಧತ ಆರೋಪಿ.

ಸೊಂಡೆಕೊಪ್ಪಕ್ಕೆ ಮನೆ ಸಾಮಾನು ತರಲು ಹೋಗಿದ್ದಾಗ ಯುವತಿಗೆ ಶ್ರೀಕಾಂತ್ ಪರಿಚಯವಾಗಿದೆ. ಫೋನ್ ನಂಬರ್‌ ಪಡೆದು ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿದ್ದ. ಬಳಿಕ ನೆಲಮಂಗಲದ ಲಾಡ್ಜ್​ಗೆ ಕರೆದೊಯ್ದು ಯುವತಿ ಜೊತೆ ದೈಹಿಕ ಸಂಪರ್ಕ ಮಾಡಿದ್ದಾನೆ.

ದಲಿತ ಜಾತಿಯವಳು ನಾನು ಮದುವೆಯಾಗುವುದಿಲ್ಲ. ಎಂಜಾಯ್ ಮಾಡುವುದಷ್ಟೇ ನನ್ನ ಕೆಲಸ ಎಂದಿದ್ದ. ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಬಳಿಕ ಯುವತಿಯನ್ನು ಲಾಡ್ಜ್​​ನಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದ. ಹೀಗಾಗಿ ನೆಲಮಂಗಲ ನಗರ ಪೊಲೀಸ್​ ಠಾಣೆಗೆ ಯುವತಿ ದೂರು ನೀಡಿದ್ದರು. ಇದೀಗ ಶ್ರೀಕಾಂತ್​ನನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ