ಹುಕ್ಕೇರಿ : ಜಾತಿ ಮತ ಬೇಧ ವಿಲ್ಲದ ದೇವರು ಅಯ್ಯಪ್ಪ ಸ್ವಾಮಿಗಳು – ರಮೇಶ ಗುರುಸ್ವಾಮಿಗಳು.
ಜಾತಿ ಮತ ಬೇಧ ವಿಲ್ಲದೆ ಸರ್ವರು ಆರಾಧಿಸುವ ದೇವರು ಅಯ್ಯಪ್ಪ ಸ್ವಾಮಿಗಳು ಎಂದು ಧಾರವಾಡದ ರಮೇಶ ಪಾತ್ರೋಟ ಗುರು ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅವರು ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಾನವನ್ನು ಉದ್ಘಾಟಿಸಿ ಮಾತನಾಡಿದರು.
ಹುಕ್ಕೇರಿ ಪಟ್ಟಣದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿದ ಅಯ್ಯಪ್ಪ ಸ್ವಾಮಿ ಸನ್ನಿಧಾನವನ್ನು ಲೋಕಾರ್ಪಣೆ ಮಾಡಿ ವಿಶೇಷ ಮಂಡಲ ಪೂಜೆ ನೇರವೆರಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಪಾತ್ರೋಟ ಗುರುಸ್ವಾಮಿ ಹುಕ್ಕೇರಿ ನಗರದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಹಾಗೂ ವಿವಿಧ ದಾನಿಗಳಿಂದ ನಿರ್ಮಿಸಿದ ಸನ್ನಿಧಾನದಲ್ಲಿ ಮಾಲಾಧಾರಿಗಳಿಗೆ ವೃತ ಆಚರಣೆಗೆ ಅನಕೂಲ ವಾಗುವದು ಮುಂದಿನ ದಿನಗಳಲ್ಲಿ ಈ ಸ್ಥಳ ಅಯ್ಯಪ್ಪನ ಮಂದಿರವಾಗಲು ಎಲ್ಲರೂ ಸಹಕರಿಸ ಬೇಕು ಎಂದರು
ನಂತರ ವಿಷೇಶ ಪೂಜೆ,ಯಜ್ಞ ಯಾಗಾದಿಗಳು ಜರುಗುದವು.
ಸೇವಾ ಸಮಿತಿ ಸದಸ್ಯ ದಿವಾಕರ ಶೇಟ್ಟಿ ಮಾತನಾಡಿ ಪ್ರತಿ ವರ್ಷ ಹುಕ್ಕೇರಿ ನಗರದಲ್ಲಿ ನೂರಾರು ಅಯ್ಯಪ್ಪನ ಮಾಲಾಧಾರಿಗಳು ದೇಣಿಗೆ ಸಂಗ್ರಹಿಸಿ ವೃತ ಆಚರಣೆ ಮಾಡಿದ ಉಳಿದ ಹಣ ಮತ್ತು ಸಾರ್ವಜನಿಕರ ಸಹಕಾರದಿಂದ ಈ ಸನ್ನಿಧಾನ ಕಟ್ಟಡ ಕಟ್ಟಲಾಗಿದೆ ಎಲ್ಲರಿಗೂ ಅಯ್ಯಪ್ಪನ ಕರುಣೆ ದೊರಕಲಿ ಎಂದರು
ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಚಿದಾನಂದ ಬಸ್ತವಾಡ, ಸುನಿಲ ಭೈರನ್ನವರ, ಅಶೋಕ ಪಟ್ಟಣಶೆಟ್ಟಿ, ಅಪ್ಪುಶಿ ತುಬಚಿ, ಪ್ರಭು ಸಾಂಬಾರೆ, ಸುಹಾಸ ನೂಲಿ, ಚನ್ನಪ್ಪ ಗಜಬರ, ಗುರು ಕುಲಕರ್ಣಿ ಹಾಗೂ ಸಮಸ್ತ ಗುರು ಸ್ವಾಮಿಗಳು, ಕನ್ಯಾ ಸ್ವಾಮಿಗಳು ಹುಕ್ಕೇರಿ ನಗರದ ಗುರು ಹಿರಿಯರು ಉಪಸ್ಥಿತರಿದ್ದರು.