ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೈನ್ಸಟಿಯಾ ವೇನರಿ 5.0 ಅಂತರ್ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರದಂದು ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೈನ್ಸಟಿಯಾ ವೇನರಿ 5.0 ಅಂತರ್ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಧಾರವಾಡದ ಡಾಕ್ಟರ್ ಚನ್ನಪ್ಪ ಅಕ್ಕಿ, ಗೌರವ ಅತಿಥಿಗಳಾಗಿ ಮಾಜಿ ಎಂ ಎಲ್ ಸಿ ಮಹಾಂತೇಶ್ ಕವಟಗಿಮಠ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾಕ್ಟರ್ ಜೆ. ಎಸ್. ಕಾವಳೇಕರ್ ಅವರ ಅಧ್ಯಕ್ಷತೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆಯನ್ನ ನೀಡಲಾಯಿತು.
ಧಾರವಾಡದ ಡಾಕ್ಟರ್ ಚನ್ನಪ್ಪ ಅಕ್ಕಿ ಅವರು ವಿದ್ಯಾರ್ಥಿಗಳು ನಿರ್ಮಿಸಿದ ರೋಬೋಟ್, ಡ್ರೋನ್ ಸೇರಿದಂತೆ ಇನ್ನುಳಿದ ವಸ್ತುಗಳು ಮತ್ತು ಅವರು ನೀಡಿದ ಮಾಹಿತಿ ಗಣ್ಯರ ಗಮನಸೆಳೆದವು.
9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಇಷ್ಟು ಅದ್ಭುತ ವಿಜ್ಞಾನ ವಸ್ತುಗಳನ್ನು ಪ್ರದರ್ಶಿಸಿದ್ದಾರೆ. ಅವರ ಕೌಶಲ್ಯವನ್ನು ಅವರ ಅರಿವನ್ನ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಹೆಚ್ಚೆಚ್ಚಾಗಿ ಓದಿನ ಕಡೆ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಂದೇ ಭಾಷೆ ಒಂದೇ ವಿಷಯಕ್ಕೆ ಸೀಮಿತವಾಗಿರದೆ ಎಲ್ಲವನ್ನ ಕಲಿತು ಎಲ್ಲದಕ್ಕೂ ಸಕ್ಷಮರಾಗಿರ ಬೇಕೆಂದು ಕರೆ ನೀಡಿದರು.
ಇನ್ನು ಮಾಜಿ ಎಂ ಎಲ್ ಸಿ ಮಹಾಂತೇಶ್ ಕವಟಗಿಮಠ ಅವರು ಪ್ರಧಾನಿ ಮೋದಿ ಇನ್ಸಪೈರ್ ಇಂಡಿಯಾ ಎಂಬ ಕಾರ್ಯಕ್ರಮವನ್ನು ದೇಶದಲ್ಲಿ ಹಮ್ಮಿಕೊಂಡು ಯುವ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ರೀತಿ ಬೆಳಗಾವಿಯ ಆರ್ ಎಲ್ ಎಸ್ ಕಾಲೇಜ್ ಪ್ರತಿ ವರ್ಷ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ. ಇಲ್ಲಿ ವಿಜೇತರಾದವರನ್ನ ಭಾರತ ಸರ್ಕಾರದ ವಿಜ್ಞಾನ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.