ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ ಕಾನ್ಸ್ಟೇಬಲ್’ನನ್ನು ಸಸ್ಪೆಂಡ್ ಮಾಡಿದ ಕಮಿಷನರ್ ಶಶಿಕುಮಾರ್
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ ಬೆಂಡಿಗೇರಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವಿರುಪಾಕ್ಷಿಯನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ.
ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಗ್ರಾಮದಲ್ಲಿ ದಾಬಾ ನಡೆಸುತ್ತಿದ್ದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಹನಮಂತ ಎಂಬುವನ ಮೇಲೆ ಕಾನ್ಸ್ಟೇಬಲ್ ವಿರುಪಾಕ್ಷಿ ಜಗಳ ತೆಗೆದು ವೇಟರ್ ಹಾಗೂ ಹನಮಂತ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದ.
ವರದಿ ನೋಡಿದ ಕಮಿಷನರ್ ಎನ್ ಶಶಿಕುಮಾರ್ ಸಾರ್ವಜನಿಕ ಸ್ಥಳದಲ್ಲಿ ತಾನೊಬ್ಬ ಆರಕ್ಷಕ ಎಂಬುದು ಗೊತ್ತಿದ್ದರೂ ಕೂಡಾ ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ದುರ್ವರ್ತನೆ ತೋರಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ ಕಾನ್ಸ್ಟೇಬಲ್ ಇದೀಗ ಸಸ್ಪೆಂಡ್ ಆಗಿದ್ದಾನೆ.
Laxmi News 24×7