ನವದೆಹಲಿ,ಡಿ.3- ಸಿಎಎ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗೆ ಹಣಕಾಸು ಸಹಾಯ ಮಾಡಿದ ಆರೋಪದ ವಿಚಾರಣೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಪಿಎಫ್‍ಐ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅವರ ಮನೆ ಮೇಲೆ ದಾಳಿ ನಡೆಸಿದೆ.
ಉನ್ನತ ಮೂಲಗಳ ಪ್ರಕಾರ ಕೇರಳದ ಮಲ್ಲಪುರಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ನಡೆಸಿದೆ. ಪಿಎಫ್‍ಐನ ಅಧ್ಯಕ್ಷ ಒ.ಎಂ.ಅಬ್ದುಲಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಾಸಿರುದ್ದೀನ್ ಯಲಮಾರನ್ ಅವರಿಗೆ ಸೇರಿದ ಕೇರಳದ ವಿವಿಧ ಭಾಗಳಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮ ಹಣ ವರ್ಗಾವಣೆ (ಪಿಎಂಎಲ್‍ಎ) ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಎಎ ಪ್ರತಿಭಟನೆ ವೇಳೆ ಹಣಕಾಸಿನ ನೆರವು ನೀಡಿದವರ ಆದಾಯ ಮೂಲಗಳನ್ನು ಹುಡುಕುತ್ತಿದೆ.
ತನಿಖೆ ಮುಂದುವರೆ ಭಾಗವಾಗಿ ಪಿಎಫ್‍ಐ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಪಿಎಫ್‍ಐ ಪ್ರಮುಖರ ಮೇಲೆ ಇಡಿ ದಾಳಿ ಮಾಡಿದೆ.