ಖಾನಾಪೂರ ತಾಲೂಕಿನ ಐತಿಹಾಸಿಕ ಹಲಸಿ ಗ್ರಾಮದ ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಹಂಜಿ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಹಂಜಿ ಕುಟುಂಬದ ವರ್ಚಸ್ಸು ತೋರಿಸಿದೆ ವಾರ್ಡ್ ನಂಬರ್ 1 ರ ಉಪ ಚುನಾವಣೆಯಲ್ಲಿ ಶ್ರೀಮತಿ ಉಮಾ ಉದಯ ಪಾರಿಪತ್ಯದಾರ ಅವರು 401 ಮತಗಳಲ್ಲಿ 287ಮತಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ.
ವರ್ಷಾ ವಿದ್ಯಾಧರ ಜಾಧವ್ ಅವರು 58 ಮತಗಳನ್ನು ಪಡೆದರೆ ವೈಶಾಲಿ ಮಲ್ಲಿಕಾರ್ಜುನ ರಜಕಣ್ಣವರ ಅವರು 47 ಮತಗಳನ್ನು ಪಡೆದುಕೊಂಡರು ಇದರಲ್ಲಿ 9 ಮತಗಳು ರದ್ದುಗೊಂಡಿವೆ ಒಟ್ಟಿನಲ್ಲಿ ಸಂಪೂರ್ಣ ಖಾನಾಪೂರ ತಾಲೂಕಿನ ಗಮನ ಸೆಳೆದಿದ್ದ
ಈ ಚುನಾವಣೆಯಲ್ಲಿ ಹಂಜಿ ಪ್ಯಾನೆಲ್ ಅಂತ್ಯಂತ ಹೆಚ್ಚು ಮತಗಳನ್ನು ಪಡೆದುಕೊಂಡು ಮತ್ತೋಮ್ಮೆ ತಮ್ಮ ಶಕ್ತಿ, ಸಾಮರ್ಥ್ಯವನ್ನು ಅರಳಿಸಿದ್ದಾರೆ.ಈ ಸಂದರ್ಭದಲ್ಲಿ ಸಂಪೂರ್ಣ ವಾತಾವರಣ ಗುಲಾಲುಮಯಗೊಂಡಿತ್ತು.ಹಲಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಂತೋಷ್ ಹಂಜಿ, ಉದ್ಯಮಿ ಸುನೀಲ್ ಹಂಜಿ ಸೇರಿದಂತೆ ಇನ್ನಿತರ ಪ್ರಮುಖರು, ಇನ್ನಿತರ ಗ್ರಾಮ ಪಂಚಾಯಿತಿ ಸದಸ್ಯರು ವಿಜಯೋತ್ಸವ ಆಚರಣೆ ಮಾಡಿದರು.