ಬೆಳಗಾವಿ :ಬೆಳಗಾವಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕೆ ಸೆಟ್ ಪರೀಕ್ಷೆಗೆ ಹೋದಾಗ ಮೊಬೈಲ್, ಚಿನ್ನಾಭರಣ ಹಾಗೂ ಹಣ ಕಳ್ಳತನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಕಳೆದ ಭಾನುವಾರ ನಡೆದ ಕೆ ಸೆಟ್ ಪರೀಕ್ಷೆಯ ವೇಳೆ ವೈಶಾಲಿ ಹಾಗೂ ರೂಪಾ ಎಂಬ ಯುವತಿಯರ ಬೆಲೆ ಬಾಳುವ ಚಿನ್ನಾಭರಣವನ್ನು,
ಹಣ ಹಾಗೂ ಮೊಬೈಲ್ ಕಳ್ಳತವಾಗಿದೆ. ಕಾಲೇಜು ಸಿಬ್ಬಂದಿಗಳ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ.ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7