ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ರಾಜ್ಯದ್ಯಾಂತ ನಡೆಸಿದ ಕೆ-ಸೆಟ್ (ಅರ್ಹತಾ/ಸ್ಪರ್ಧಾತ್ಮಕ ಪರೀಕ್ಷೆ) ಪರೀಕ್ಷೆ ಕೇಂದ್ರದಲ್ಲಿ ನೀತಿ ನಿಯಮಗಳ ಹೆಸರಿನಲ್ಲಿ ಇಂದು ಪರೀಕ್ಷಾ ಕೇಂದ್ರದ ಅಧೀಕ್ಷರು ಹಲವು ಅವಾಂತರಗಳು ನಡೆಸಿದಕ್ಕೆ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಹುಬ್ಬಳ್ಳಿಯ ಎಸ್ ಎಸ್ ಕೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಈ ಬಗ್ಗೆ ಹಲವು ಮಹಿಳಾ ಅಭ್ಯರ್ಥಿಗಳು ತಮ್ಮ ನೋವು ಪ್ರಜಾಕಿರಣ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
ಕೆ ಸೆಟ್ ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಅಭ್ಯರ್ಥೀಗಳ ಕಾಲುಂಗರ, ಕಾಲ್ ಚೈನ್, ಮೂಗಬಟ್ಟು ಹೆಣ್ಣು ಮಕ್ಕಳ ಮೈ ಮೇಲಿನ ವೇಲ್ ಕೂಡ ತೆಗೆಸಿ ಪರೀಕ್ಷಾ ಕೇಂದ್ರದ ಒಳಗಡೆ ಬಿಡುವ ಮೂಲಕ ಪುರುಷಅಭ್ಯರ್ಥೀಗಳ ಎದುರು ಅವಮಾನ ನಡೆಸಿದಕ್ಕೆ ಕೆ ಸೆಟ್ ಪರೀಕ್ಷಾರ್ಥಿಗಳು ಕೆಲಕಾಲ ಕಕ್ಕಾಬಿಕ್ಕಿಯಾಗಿದ್ದರು.
ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲು ಅಲ್ಲಿ ಅವಕಾಶವಿಲ್ಲದ ಪರಿಣಾಮ ಆತಂಕದಿಂದಲೇ ಪರೀಕ್ಷೆ ಬರೆದು ಹೊರಬಂದ ಘಟನೆ ನಡೆದಿದೆ.
ನೆಟ್ ಪರೀಕ್ಷೆ ವೇಳೆ ಹೆಣ್ಣು ಮಕ್ಕಳ ಕಾಲುಂಗರ, ಕಾಲ್ ಚೈನ್, ಮೂಗಬಟ್ಟು ಮೈ ಮೇಲಿನ ವೇಲ್ ಹಾಗೂ ಈ ತರಹ ಯಾವುದೇ ರೀತಿಯ ವಸ್ತುಗಳನ್ನು ತೆರೆವು ಮಾಡಿರಲಿಲ್ಲ ಆದರೆ ಕೆ-ಸೆಟ್ ಪರೀಕ್ಷೆಗೆ ಇದು ಯಾಕೆ ಹೀಗೆ ಎಂದು ಕಿಡಿಕಾರಿದರು. ಈ ಬಗ್ಗೆ ಕರ್ನಾಟಕಪರೀಕ್ಷಾ ಪ್ರಾಧೀಕಾರ ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.