Breaking News

ಅಮರಸಿದ್ಧೇಶ್ವರರು ಕೊಹಿನೂರ್ ವಜ್ರವಿದ್ದಂತೆ: ಸಚಿವ ಸತೀಶ ಜಾರಕಿಹೊಳಿ ಅಭಿಮತ.

Spread the love

ಅಮರಸಿದ್ಧೇಶ್ವರರು ಕೊಹಿನೂರ್ ವಜ್ರವಿದ್ದಂತೆ
ಡಾಕ್ಟರೇಟ್ ಪಡೆದ ಅಮರಸಿದ್ಧೇಶ್ವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಲೋಕಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಮತ.

ಅಂಕಲಗಿ. ೨೫- ಅಮರಸಿದ್ಧೇಶ್ವರರು ತಮ್ಮಲ್ಲಿಯ ಸಂಸ್ಕ್ರತ ಭಾಷಾ ವಿಷಯವಾದ ದಶೋಪನಿಷತ ಮತ್ತು ದಶ ಶರಣರದ್ರಷ್ಟಿಯಲ್ಲಿ ಈಶ್ವರ ಸ್ವರೂಪ ವಿಷಯದ ಮೇಲೆ ಮಂಡಿಸಿದ ಮಹಾಪ್ರಭಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಸಂಪಾದಿಸಿದ್ದು ನಮ್ಮ ನಾಡಿನ ಹೆಮ್ಮೆ ಇದಾಗಿದೆ. ಅವರು ಕೋಹಿನೂರ ವಜ್ರವಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಅವರು ಭಾನುವಾರ ಸಂಜೆ ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಜರುಗಿದ ಮಠದ ಮಠಾಧ್ಯಕ್ಷರಾದ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಕ್ರತ ದಶೋಪನಿಷತ, ದಶ ಶರಣರದ್ರಷ್ಟಿಯಲ್ಲಿ ಈಶ್ವರ ಸ್ವರೂಪ ವಿಷಯದ ಮೇಲೆ ಮಂಡಿಸಿದ ಮಹಾಪ್ರಭಂಧಕ್ಕೆ ಪಿ ಎಚ್ ಡಿ ಪಡೆದ ನಿಮಿತ್ತವಾಗಿ ಶ್ರೀ ಮಠದ ಭಕ್ತರಿಂದ ಜರುಗಿದ ಅಭಿನಂದನಾ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡು ಪ್ರಭಂದ ಬಿಡುಗಡೆಗೊಳಿಸಿ ಮಾತನಾಡಿದರು.

ಶ್ರೀಗಳು ಶ್ರೀ ಮಠ ಮತ್ತು ಭಕ್ತ ಲೋಕದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ಈ ಶ್ರಮಕ್ಕೆ ನಾವೆಲ್ಲರೂ ಬೆಂಬಲಿಸೋಣ ಎಂದರಲ್ಲದೆ, ಅವರಲ್ಲಿ ಹೊಸ ಹೊಸ ವಿಚಾರಗಳಿದ್ದು, ಸಂಗೀತ ಪಾಠಶಾಲೆ, ಅನ್ನದಾಸೋಹ, ಸೇರಿದಂತೆ ಅಭಿವ್ರದ್ಧಿ ಪರ ನಿಲುವಿಗೆ ಜೊತೆಯಾಗೋಣ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರುಗೋಡ ಶ್ರೀ ನೀಲಕಂಠ ಮಹಾಸ್ವಾಮಿಗಳು,
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಸೋಮಶೇಖರ ಮಠ ಮುನವಳ್ಳಿ ,
ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಹೊಳೆಹುಚ್ಚೇಶ್ವರ ಸಂಸ್ಥಾನ ಮಠ ಕಮತಗಿ ಕೋಟೆಕಲ್ ,
ಶ್ರೀ ಶಿವಬಸವ ಮಹಾಸ್ವಾಮಿಗಳು ಹಾವೇರಿ ವಿರಕ್ತಮಠ ಹುಕ್ಕೇರಿ ,
ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠ ಬೆಳಗಾವಿ
ಷ ಬ್ರ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ ಮಠ ನವಲಕಲ್ ರಾಯಚೂರು,
ಶ್ರೀ ಮ ನಿ ಪ್ರ ಶಿವಮೂರ್ತಿ ಮಹಾಸ್ವಾಮಿಗಳು ತೊಂಟದಾರ್ಯ ವಿರಕ್ತಮಠ ಅರಳಿಕಟ್ಟಿ ,,
ಶ್ರೀ ಗುರುದೇವ ದೇವರು ಪ್ರಭುಲಿಂಗೇಶ್ವರ ಮಠ ಕಮತೇನಟ್ಟಿ ,
ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಪಾಶ್ಚಾಪುರ,
ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಗಳು ಚರಮೂರ್ತೇಶ್ವರ ಮಠ ಮಮದಾಪುರ ,,ಶ್ರೀಗಳು ಮಾತನಾಡಿ ಅಮರಸಿದ್ಧೇಶ್ವರರ ಕಾರ್ಯ ಶ್ಲ್ಯಾಘಿಸಿದರು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಸಕಲ ಭಕ್ತರ ಆಶಯದಂತೆ ಹೆಜ್ಜೆ ಇಡುವೆ . ಮಠದ ಅಭಿವ್ರದ್ಧಿಯೊಂದೇ ನನ್ನ ಪ್ರಮುಖ ಧ್ಯೇಯ ಎಂದರು. ನಾನು ನಿಮ್ಮ ಮಗ. ಈ ನಾಡು ಈ ಮಠದ ಶ್ರೇಯಸ್ಸಿಗೆ ನನ್ನ ಜಪವಾಗಿದೆ ಎಂದರು.
ವೇದಮೂರ್ತಿ ಡಾ ಮಹಾಂತೇಶ್ ಶಾಸ್ತ್ರಿಗಳು, ಶಾಸಕರಾದ ಬಾಬಾ ಸಾಹೇಬ್ ಪಾಟೀಲ, ಕಿತ್ತೂರು
ವಿಶ್ವಾಸ್ ವೈದ್ಯ ಶಾಸಕರು ಸವದತ್ತಿ
ಧುರೀಣರಾದ ಅಶೋಕ್ ಪೂಜಾರಿ
ಪೃಥ್ವಿರಾಜ್ ಕತ್ತಿ
ಹುಕ್ಕೇರಿ , ಮಹಾಂತೇಶ ಕವಟಗಿಮಠ
ಮಾಜಿ ವಿಧಾನ ಪರಿಷತ್ ಸದಸ್ಯರು ಚಿಕ್ಕೋಡಿ,
ಭರತ್ ಈಟಿ ಬಾಗಲಕೋಟ
ಸಂತೋಷ್ ವಕ್ರಾಣಿ ಬಾಗಲಕೋಟ ,
ಬ್ರಿಜ್ಜಿಷ್ ಪಾಟೀಲ್
ಸಿರವಾರ ಸೇರಿದಂತೆ ಅಪಾರ ಭಕ್ತರು, ಅಭಿಮಾನಿಗಳು, ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ