Breaking News

ಬಿಪಿಎಲ್ ಕಾರ್ಡ ರದ್ದು: ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ

Spread the love

ಸರ್ಕಾರ ಸದ್ದಿಲ್ಲದೆ ಬಿಪಿಎಲ್​ ಕಾರ್ಡ್ ಆಪರೇಷನ್​ಗೆ ಇಳಿದಂತೆ ಕಾಣುತ್ತಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗುತ್ತಿದೆ. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಆರೋಪ ಮಾಡಿದ್ದು, ಹಿಂದೂಗಳನ್ನೆ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಹಿಂದೂಗಳ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಆರೋಪಿಸಿದ ಯತ್ನಾಳ್, ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು. ಸಿದ್ದರಾಮಯ್ಯನೆ ಹಿಂದೂಗಳ ಓಟು ಬೇಡ ಎಂದಿದ್ದಾರೆ. ಹಿಂದೂಗಳ ರೇಷನ್ ಕಾರ್ಡ್ ಕಡಿತವಾಗುತ್ತಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲು ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗುತ್ತಿದೆ. ರದ್ದಾದ ಗ್ರಾಹಕರ ಲಿಸ್ಟ್ ತೆಗೆದುಕೊಳ್ಳುತ್ತೇವೆ. ಇದನ್ನ ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡುತ್ತೇವೆ. ಹಿಂದೂಗಳಿಗೆ ರೇಷನ್ ಕಾರ್ಡ‌ನಲ್ಲಿ ಅನ್ಯಾಯ ಆಗಬಾರದು ಕಾಂಗ್ರೆಸ್ ನವರು ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ, ಪಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಷನ್ ಕಾರ್ಡ್ ರದ್ದಾಗಿವೆ. ಇವರ ಟಾರ್ಗೆಟ್ ಹಿಂದೂಗಳು ಓಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದೂಗಳನ್ನ ತುಳಿಯಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇನ್ನು ವಕ್ಫ್ ವಿರುದ್ಧ ಕೂಡ ಅಧಿವೇಶನದ ವೇಳೆ ಹೋರಾಟ ಮಾಡುವುದಾಗಿ ಯತ್ನಾಳ್ ತಿಳಿಸಿದ್ದಾರೆ. ವಕ್ಫ್ ನೋಟಿಸ್ ವಾಪಸ್ ಪಡೆದರೆ ಸಾಲೋದಿಲ್ಲ, ವಕ್ಫ್ ನೋಟಿಫಿಕೇಷನ್ ರದ್ದಾಗಬೇಕು. ಕರಾಳ ಕಾನೂನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗು ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪೋದಿಲ್ಲ. ದೇಶದಲ್ಲಿ ಇರಬೇಕಾದ್ರೆ ನಮ್ಮ ದೇಶದ ಕಾನೂನು ಪಾಲಿಸಬೇಕು. ನೋಟಿಸ್ ನೀಡದೆ ಈ ವರೆಗೆ ಸೇರ್ಪಡೆಯಾದ ವಕ್ಫ್ ಹೆಸರು ರದ್ದಾಗಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ.ವಕ್ಫ್ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ ಎಂದ ಯತ್ನಾಳ್, ಇನ್ನೊಮ್ಮೆ ಜೆಪಿಸಿಗೆ ಮನವಿ ಮಾಡುತ್ತೇವೆ. ಮೊದಲು ವಕ್ಫ್ ಟ್ರಿಬ್ಯುನಲ್ ಹೋಗಬೇಕು, ಇದು ನಮ್ಮ ಆಗ್ರಹ. ಅವರದೆ ಕೋರ್ಟು, ಅವರದೆ ನ್ಯಾಯಾಲಯ, ಕಳ್ಳರ ಬಳಿ ನ್ಯಾಯ ಬೇಡುವ ಹಾಗಾಗುತ್ತೆ. ವಕ್ಫ್ ವಿರುದ್ಧ ಸಾಯುವವರೆಗೂ ಹೋರಾಟ ಮಾಡುತ್ತೇವೆ. ಮೋದಿಯವರು 42 ಆಪರೇಶನ್ ಮಾಡ್ತಿದ್ದಾರೆ. ಅದ್ರಲ್ಲು ವಕ್ಫ ಜೀವಂತ ಉಳಿಯೊಲ್ಲ, ಜೀವಂತ ಉಳಿದರು ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಯತ್ನಾಳ್ ತಿಳಿಸಿದರು.


Spread the love

About Laxminews 24x7

Check Also

ನವನಗರದ ಸರಾಯಿ ಅಂಗಡಿ ವಿರುದ್ಧ ಮಹಿಯರಿಂದ ಮುಂದುವರೆದ ಪ್ರೊಟೆಸ್ಟ್

Spread the loveನವನಗರದ ಸರಾಯಿ ಅಂಗಡಿ ವಿರುದ್ಧ ಮಹಿಯರಿಂದ ಮುಂದುವರೆದ ಪ್ರೊಟೆಸ್ಟ್….ಮಹಿಳೆಯರ ಹೋರಾಟಕ್ಕೆ ಸಾಥ್ ನೀಡಿದ ಪುರುಷರ್ …. ಕಳೆದೊಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ