Breaking News

ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್‌ ಕಾರ್ಡ್‌ ರದ್ದು : ಸಂತೋಷ್‌ ಲಾಡ್‌

Spread the love

ಬೆಂಗಳೂರು, ನ.20-ರಾಜ್ಯದಲ್ಲಿ ಶೇ.15ರಷ್ಟು ಅನರ್ಹ ಬಿಪಿಎಲ್‌ ಪಡಿತರ ಚೀಟಿ ರದ್ದಾಗಬಹುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.15ಕ್ಕಿಂತ ಹೆಚ್ಚು ಪಡಿತರ ಚೀಟಿಗಳು ರದ್ದಾಗುವುದಿಲ್ಲ.

ಕೆಲವು ಕಡೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿರುವ ಆರೋಪಗಳು ಬರುತ್ತಿವೆ. ನಮ ಕಲಘಟಗಿಯಲ್ಲಿ 400 ಕಾರ್ಡ್‌ ರದ್ದಾಗಿವೆ ಎಂದರು.

ಪಡಿತರ ಚೀಟಿಗಳ ಪರಿಶೀಲನೆ ವೇಳೆ ಅರ್ಹರು ಇದ್ದರೆ, ಅಂಥವರ ಕಾರ್ಡ್‌ಗಳನ್ನು ವಾಪಸ್‌‍ ಕೊಡುತ್ತೇವೆ. ಕೆಲವರು ಕಾರ್ಡ್‌ ಬೇಡ ಎನ್ನುತ್ತಿದ್ದರು. ಒಂದು ವೇಳೆ ತಪ್ಪು ಮಾಹಿತಿಯಿಂದ ರದ್ದಾದರೆ ಅಂತಹವರಿಗೆ ಮರಳಿ ಕಾರ್ಡ್‌ ನೀಡಲಾಗುವುದು. ಅರ್ಹರು ಬಿಪಿಎಲ್‌ ಕಾರ್ಡ್‌ನಿಂದ ವಂಚಿತರಾಗಬಾರದು ಅನರ್ಹರು ಈ ಕಾರ್ಡ್‌ಗಳನ್ನ ಪಡೆಯಬಾರದು ಎಂಬುದು ಸರ್ಕಾರದ ಉದ್ದೇಶ. . ನಾವು ಎಲ್ಲಾ ಕಾರ್ಯಕ್ರಮಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ನಕಲಿ ಕಾರ್ಡ್‌ ರದ್ದು :
ಕಾರ್ಮಿಕರ ಕಾರ್ಡ್‌ಗಳನ್ನು ಆನ್‌ಲೈನ್‌ ಮೂಲಕ ನೀಡಲು ಅಂಬೇಡ್ಕರ್‌ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗಿ ನೇರ ಪರಿಶೀಲನೆ ಮಾಡಿ ಕಾರ್ಡ್‌ ಕೊಡುತ್ತೇವೆ. ನಕಲಿ ಕಾರ್ಡ್‌ ಮಾತ್ರ ರದ್ದ ಮಾಡುತ್ತೇವೆ. ಅರ್ಹರನ್ನು ಗುರುತಿಸಿ ಕಾರ್ಡ್‌ ಕೊಡುತ್ತೇವೆ. ಸ್ಥಳೀಯ ಶಾಸಕರ ಮೂಲಕ ಸರ್ವೆ ಮಾಡಿಸಿ ಕಾರ್ಮಿಕರ ಕಾರ್ಡ್‌ ಮಾಡಲಿಸಿದ್ದೇವೆ ಎಂಬ ಮಾಹಿತಿ ನೀಡಿದರು.

ಸಿಎಂ, ಡಿಸಿಎಂ ತೀರ್ಮಾನ :
ಸಂಪುಟ ಪುನರ್‌ ರಚನೆಗೆ ಆಗ್ರಹಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವರಾಗಲು ಎಲ್ಲರಿಗೂ ಕೆಪಾಸಿಟಿ ಇದೆ. ಕಾಂಗ್ರೆಸ್‌‍ನಲ್ಲಿ 136 ಶಾಸಕರು ಇದ್ದಾರೆ. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಈ ರೀತಿ ಅಭಿಪ್ರಾಯ ಶಾಸಕ ನರೇಂದ್ರಸ್ವಾಮಿ ಒಬ್ಬರದ್ದಲ್ಲ, ಬಹಳ ಜನರ ಅಭಿಪ್ರಾಯ ಇದೆ ಎಂದರು.

ಅನುದಾನದ ಬಗ್ಗೆ ಕಾಂಗ್ರೆಸ್‌‍ ಶಾಸಕ ಗವಿಯಪ್ಪ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನೇ ಮುಂದಿಟ್ಟು ಯಾಕೆ ಹೇಳಿದ್ದಾರೋ? ನೀವು ಗವಿಯಪ್ಪಣ್ಣನವರನ್ನೇ ಕೇಳಬೇಕು ಎಂದು ಹೇಳಿದರು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ