ಮುಂಬಯಿ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲು ಅಕ್ರಮ ಬಿಟ್‌ಕಾಯಿನ್ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು ಸಂಸದೆ ಮತ್ತು ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಬುಧವಾರ(ನ20)ತಳ್ಳಿಹಾಕಿದ್ದಾರೆ.
ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಳೆ “ಆಡಿಯೋ ಕ್ಲಿಪ್ ನಲ್ಲಿ ಇರುವುದು ನನ್ನ ಧ್ವನಿ ಅಲ್ಲ. ಈ ಎಲ್ಲಾ ಧ್ವನಿ ಟಿಪ್ಪಣಿಗಳು ಮತ್ತು ಸಂದೇಶಗಳು ನಕಲಿ” ಎಂದರು.
ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸಿದ ಒಂದು ದಿನದ ನಂತರ ಸುಳೆ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮಾಜಿ ಪೊಲೀಸ್ ಕಮಿಷನರ್ ಮತ್ತು ಡೀಲರ್‌ನೊಂದಿಗೆ ಅಕ್ರಮ ವಹಿವಾಟು ನಡೆಸಲು ಪಿತೂರಿ ನಡೆಸಿದ್ದಾರೆ. ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (MVA) ಪರವಾಗಿ ಚುನಾವಣಾ ಫಲಿತಾಂಶವನ್ನು ತಿರುಗಿಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸುಳೆ ಅವರು, “ನಕಲಿ ಧ್ವನಿಯನ್ನು ಸೃಷ್ಟಿಸಲಾಗಿದೆ, ಅಪರಾಧಿ ಯಾರೆಂದು ಪೊಲೀಸರು ಪತ್ತೆ ಮಾಡುತ್ತಾರೆ. ಇದು ನನ್ನ ಧ್ವನಿಯೂ ಅಲ್ಲ ಅಥವಾ ನಾನಾ ಪಟೋಲೆ ಅವರ ಧ್ವನಿಯೂ ಅಲ್ಲ.ನಾನು ಬಿಟ್‌ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ವಿರುದ್ಧ ಮಾತನಾಡಿದ್ದೇನೆ. ನಾನು ಅದರ ಬಗ್ಗೆ ತುಂಬಾ ಗಂಭೀರವಾದ ವಿಷಯಗಳನ್ನು ಎತ್ತಿರುವ ವ್ಯಕ್ತಿ. ಬಿಜೆಪಿಯವರಿಗೆ ಉತ್ತರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಸಂಪೂರ್ಣ ಪಾರದರ್ಶಕತೆಯ ವ್ಯಕ್ತಿಯಾಗಿರುವುದರಿಂದ ಬಿಜೆಪಿಯ ಯಾವುದೇ ಪ್ರಶ್ನೆಗೆ ಉತ್ತರಿಸಲು ನನಗೆ ತುಂಬಾ ಸಂತೋಷ” ಎಂದರು.
Laxmi News 24×7