ಬೆಳಗಾವಿ: ತಾಲ್ಲೂಕಿನ ಹೊನ್ನಿಹಾಳ ಬಳಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಸಾಂಬ್ರಾ ವಿಮಾನ ನಿಲ್ದಾಣ ಹತ್ತಿರದ ಹೊಲದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಆದರೆ, ಗುರುತು ಪತ್ತೆಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.
‘ಕಲ್ಲಿನಿಂದ ತಲೆಗೆ ಜಜ್ಜಿ ಯುವಕನ ಹತ್ಯೆ ಮಾಡಲಾಗಿದೆ. ಮೃತದೇಹ ನೋಡಿದ ಸ್ಥಳೀಯ ರೈತರು ನಮಗೆ ಮಾಹಿತಿ ಕೊಟ್ಟಿದ್ದು, ಘಟನಾ ಸ್ಥಳಕ್ಕೆ ಬಂದಿದ್ದೇವೆ. ಕೊಲೆಗೆ ಇನ್ನೂ ಕಾರಣ ಗೊತ್ತಾಗಿಲ್ಲ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಮಾರಿಹಾಳ ಠಾಣೆ ಪೊಲೀಸರು ತಿಳಿಸಿದ್ದಾರೆ.
Laxmi News 24×7