ಮಂಗಳೂರು: ನಗರದ ಹೊರವಲಯದಲ್ಲಿರುವ ಉಚ್ಚಿಲ ಬೀಚ್ ಬಳಿಯ ಖಾಸಗಿ ರೆಸಾರ್ಟ್‌ವೊಂದರ (Resort) ಈಜುಕೊಳದಲ್ಲಿ (Swimming Pool) ಮೂವರು ಯುವತಿಯರು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ (Death) ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಈ ಪ್ರಕರಣದ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್‌ಡೌನ್ ಮಾಡಲಾಗಿದೆ.
ರೆಸಾರ್ಟ್‌ನ ಉದ್ದಿಮೆ ಪರವಾನಿಗೆ ರದ್ದು
ರೆಸಾರ್ಟ್ ನಲ್ಲಿ ನ್ಯೂನ್ಯತೆಗಳು ಇರೋ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ರೆಸಾರ್ಟ್‌ನ ಉದ್ದಿಮೆ ಪರವಾನಿಗೆ ರದ್ದು ಪಡಿಸಿ ಉಳ್ಳಾಲ ಪುರಸಭೆ ಆದೇಶ ಹೊರಡಿಸಿದೆ. ತನಿಖೆ ಮುಗಿಯುವವರೆಗೂ ರೆಸಾರ್ಟ್‌ಗೆ ಯಾರಿಗೂ ಪ್ರವೇಶ ಇರುವುದಿಲ್ಲ.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ಥಾಂತರ
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೂವರು ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ತಡ ರಾತ್ರಿಯೇ ಕುಟುಂಬಸ್ಥರು ಮೃತ ದೇಹಗಳೊಂದಿಗೆ ಮೈಸೂರಿಗೆ ತೆರಳಿದರು.