ಕಾಗವಾಡ :ಕಾಗವಾಡ ಮತಕ್ಷೇತ್ರದ ಜೂಗುಳ, ಉಗಾರ ಬುದ್ರುಕ, ಮೋಳೆ ಗ್ರಾಮಗಳಲ್ಲಿ ಚರಂಡಿಯ ಅಶುದ್ದ ನೀರು ಸ್ವಚ್ಛಗೋಳಿಸುವ ಆನಲೈಸ್ ಚರಂಡಿ ಯೋಜನೆ ಮುಖ್ಯ ಮಂತ್ರಿಗಳ ಎಸ್.ಡಿ.ಎಮ್.ಯೋಜನೆ ಅಡಿಯಲ್ಲಿ ೨ ಕೋಟಿ ೪೩ ಲಕ್ಷ ರೂಪಾಯಿ ಮತ್ತು ಜೂಗುಳ ಕಾಗವಾಡ, ಮೋಳವಾಡ ಗ್ರಾಮದ ಶ್ರೀ ಲಕ್ಷಿö್ಮÃ ಮಂದಿರದ ರಸ್ತೆ ಅಭಿವೃದ್ದಿಗೊಳಿಸಲು ೧ ಕೋಟಿ ೬೦ ಲಕ್ಷ ಸುಮರು ೪ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ಕೈಗೊಂಡಿದ್ದು ಇದರ ಭೂಮಿ ಪೂಜೆ ಶಾಸಕ ರಾಜು ಕಾಗೆ ಇವರು ನೇರವೇರಿಸಿದರು.
ಶನಿವಾರರಂದು ಜೂಗುಳ ಗ್ರಾಮದಲ್ಲಿ ಕೃಷ್ಣಾ ನದಿಗೆ ಚರಂಡಿ ನೀರು ಹರಿದು ಹೋಗುವ ಚರಂಡಿ ನೀರು ಶುದ್ದಿಗೊಳಿಸುವ ಆನಲೈಸ್ ಚರಂಡಿ ಯೋಜನೆ ಅಡಿಯಲ್ಲಿ ಕಾಮಗರಿಗೆ ಪೂಜೆ ನೇರವೇರಿಸಿ ಶಾಸಕ ರಾಜು ಕಾಗೆ ಮಾತನಾಡುವಾಗ ಕಳೆದ ಅನೇಕ ವರ್ಷಗಳಿಂದ ಈ ಗ್ರಾಮಗಳ ಬೇಡಿಕೆಗಳು ಆಗಿದ್ದವು ಈಗಾಗಲೇ ಸುಮಾರು ೪ ಕೋಟಿ ರೂಪಾಯಿ ಅನುದಾನದಲ್ಲಿ ಇಲ್ಲಿಗೆ ಯೋಜನೆಗಳು ನೀಡಿದ್ದು, ಉನ್ನುಳಿದ ಗ್ರಾಮಗಳಲ್ಲಿ ಹಂತ ಹಂತವಾಗಿ ಯೋಜನೆಗಳು ನೀಡುತ್ತೇನೆ. ಎಂದು ಹೇಳಿ ಈ ಯೋಜನೆಗಳು ಯಶಸ್ಸುಗೊಳಿಸಲು ಸ್ಥಳಿಯ ನಾಗರಿಕರು ಕಾಮಗಾರಿಗಳ ಮೇಲೆ ನೀಗಾವಹಿಸಬೇಕೆಂದು ಸಲಹೆ ನೀಡಿದರು.
ತಾಲೂಕಾ ಪಂಚಾಯಿತಿಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ವೀರಣ್ಣಾ ವಾಲಿ ಇವರು ಎಲ್ಲ ಕಾಮಗಾರಿಗಳ ಬಗ್ಗೆ ಶಾಸಕರಿಗೆ ವಿವಿರವಾದ ಮಾಹಿತಿ ನೀಡಿದರು.
ಜೂಗುಳ ಗ್ರಾಮದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷ ಕಾಕಾ ಪಾಟೀಲ, ಡಿ.ಕೆ.ಎಸ್.ಎಸ್. ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಉಮೇಶ ಪಾಟೀಲ, ಸುಭಾಷ ಪಾಟೀಲ, ಭಾಸ್ಕರ ಪಾಟೀಲ, ಅನೀಲ ಕಡೋಲೆ, ಮೋಳವಾಡ ಗ್ರಾಮದ ಕಾರ್ಯಕ್ರಮದಲ್ಲಿ ಮಾರುತಿ ಕೋಕನೆ, ರಾಜು ನಾಂದನಿ, ಅಜೀತ ಗಡ್ಡೆನ್ನವರ, ಅಶೋಕ ಚೌಗುಲೆ, ಗ್ರಾಮ ಪಂಚಾಯತಿಯ ಅಧ್ಯಕ್ಷ ಆಶೋಕ ನಾಂದನಿ, ಉಗಾರ ಗ್ರಾಮದ ಸಮಾರಂಭದಲ್ಲಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಶೀತಲ ಪಾಟೀಲ, ವೀಪುಲ ಪಾಟೀಲ, ರಾಹುಲ ಶಹಾ, ವಸಂತ ಖೋತ, ಗುತ್ತ್ತಿಗೆದಾರರಾದ ಅನೀಲ ಸತಿ, ಎಮ್.ಎಸ್.ಮಂಗಳೂರು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು