Breaking News

ಬೆಳಗಾವಿಯ ವಡ್ಡರವಾಡಿಯಲ್ಲಿ ಬಟ್ಟೆ ಹರಿದು ಮಹಿಳೆ ಮೇಲೆ ಹಲ್ಲೆ

Spread the love

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಆಕೆಯ ಬಟ್ಟೆ ಹರಿದು ಹಾಕಲಾಗಿದೆ. ಪಕ್ಕದ ಮನೆಯವರೇ ಮಹಿಳೆ ಮೇಲೆ ಹಲ್ಲೆ ನಡೆಸಿ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ.

ವಡ್ಡರವಾಡಿ ಮನೆಯಲ್ಲಿ ತಾಯಿ-ಮಗಳು ಸೇರಿ ನಾಲ್ವರು ಮನೆಯೊಂದರಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ ಕುಟುಂಬದವರು ಮಹಿಳೆಯ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡುತ್ತಿದ್ದಾರೆ. ಮನೆಗೆ ಪದೇ ಪದೇ ಯಾರೋ ಸಂಬಂಧವಿಲ್ಲದವರು ಬರುತ್ತಾರೆ.

ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದರು. ಇದೀಗ ನೆರೆಮನೆಯವರು ಏಕಾಏಕಿ ಮನೆಗೆ ನುಗ್ಗಿ ತಾಯಿ ಮಗಳನ್ನು ಹೊರಗೆಳೆದು ತಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಣ್ಣಿನ ಚಿಕಿತ್ಸೆಗೆ ಮಾಧುರಿ ಜಾಧವ್ ಫೌಂಡೇಶನ್ ಮೂಲಕ ಚೆಕ್ ಹಸ್ತಾಂತರ

Spread the loveಬೆಳಗಾವಿ: ಪಟಾಕಿ ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಶಹಾಪುರದ ಶಿವ ಲೋಹರ್ ಅವರ ಚಿಕಿತ್ಸೆಗೆ ಸಹಾಯದ ಮಹಾಪೂರ ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ