ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಎಲ್ಲರ ಅಭಿಪ್ರಾಯ ಪಡೆದುಕೊಂಡು ಒಳ್ಳೆಯ ರೀತಿ ಆಡಳಿತ ನಡೆಸಬೇಕೆಂಬ ತಿರ್ಮಾಣ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ರಾಯಬಾಗ ತಾಲೂಕಿನ ಅಪ್ಪಾಸಾಹೇಬ ಕುಲಗೋಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಅವರೇ ಮುಂದುವರೆಯಲಿದ್ದು, ಎಲ್ಲ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಸದಸ್ಯರು, ಶಾಸಕರ ನಿರ್ಣಯ ಪಡೆದು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಮೂರು ಸಹೋದರರು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವ ಕುರಿತು ಮಾತನಾಡಿದ ಅವರು, ನಾವು ಸಹೋದರರು ಬೇರೆ ಬೇರೆ ಪಕ್ಷದಲ್ಲಿದ್ದೂ, ಅವರವರ ಅಭ್ಯರ್ಥಿಗಳು ಇರುವದರಿಂದ ನಾವು ಇಲ್ಲಿ ಬಂದಿದ್ದೇವೆ ಅಷ್ಟೆ. ಇದರಲ್ಲಿ ಏನು ವಿಶೇಷತೆಯಿಲ್ಲ ಎಂದ ಅವರು, ಒಂದೊಂದು ಪಾರ್ಟಿಯಲ್ಲಿ ಒಬ್ಬಬ್ಬ ಅಭ್ಯರ್ಥಿ ಇರುವದರಿಂದ ಹೀಗಾಗಿ ಸಹೋದರರು ಕೋಡಿದ್ಧೇವೆ ಅಷ್ಟೆ ಎಂದು ನಗೆ ಚಟಾಕಿ ಹಾರಿಸಿದರು.