ಯಾದಗಿರಿ: ಈ ಹಿಂದಿನ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಸರಕಾರದಲ್ಲಿ ವಕ್ಫ್ ವಿಚಾರವಾಗಿ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಯಾದಗಿರಿಯಲ್ಲಿ ಸೋಮವಾರ (ನ.04) ಮಾತನಾಡಿದ ಅವರು, ನಿಜವಾಗಿ ರೈತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್, ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದು ರೈತರಿಗೆ ಭೂಮಿ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ.
ಈಗ ಕಾಂಗ್ರೆಸ್ ಸರಕಾರ ರೈತರ ಭೂಮಿ ವಾಪಸ್ ಪಡೆಯುವ ಕೆಲಸ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.
ವಕ್ಫ್ ನೊಟೀಸ್ ಆದೇಶ ವಾಪಸ್ ಪಡೆಯಲಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿ.ಕೆ ಅವರು ಹೇಳಿದ್ದಾರೆ ಎಂದರು.
ವಕ್ಫ್ ಟ್ರಬುನಲ್ ರದ್ದುಗೊಳಿಸುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆಗೆ ಉಗ್ರಪ್ಪ ತಿರುಗೇಟು ನೀಡಿದ ಅವರು ಯತ್ನಾಳ್ ಟ್ರಬುನಲ್ ತೆಗೆದು ಹಾಕಬೇಕೆಂದು ಹೇಳುತ್ತಾರೆ, ನಿಮಗೆ ತಾಕತ್ತಿದ್ದರೆ ಮೋದಿಗೆ ಹೇಳಿ ಟ್ರಬುನಲ್ ತೆಗೆದು ಹಾಕಬೇಕೆಂದು ಎಂದು ಉಗ್ರಪ್ಪ ಸವಾಲೆಸಿದರು.