ಬಳ್ಳಾರಿ: ‘ರಾಜ್ಯದ ಅಭಿವೃದ್ಧಿ ಕುಸಿದಿದೆ. ಗ್ಯಾರಂಟಿಗಳು ಕಣ್ಣೊರೆಸುವ ತಂತ್ರಗಳಂತಾಗಿವೆ. ಇಂಥ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಹಭಾಸ್‌ಗಿರಿ ಹೇಳಬೇಕಿತ್ತಂತೆ. ಮೋದಿ ಅವರ ಪಾದ ದೂಳಿಗೂ ಸಿದ್ದರಾಮಯ್ಯ ಸಮವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಸಂಡೂರಿನಲ್ಲಿ ಭಾನುವಾರ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೇ ಗ್ಯಾರಂಟಿಗಳ ಬಗ್ಗೆ ಛೀಮಾರಿ ಹಾಕಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರ ನಡೆಸುವ ಈ ಚೆಂದಕ್ಕೆ ಮೋದಿ ಶಹಬ್ಬಾಸ್‌ಗಿರಿ ಕೊಡಬೇಕೆ?’ ಎಂದು ವಿಜಯೇಂದ್ರ ವಾಗ್ದಾಳಿ
ನಡೆಸಿದರು.
‘ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಿ.ಎಂಗೆ ನೈತಿಕತೆಯೇ ಇಲ್ಲ. ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರದಲ್ಲಿ ಅವರೇ ಆರೋಪಿ ನಂಬರ್ ಒನ್’ ಎಂದು ಟೀಕಿಸಿದರು.
ಜಮೀರ್ ಅಯೋಗ್ಯ ಮಂತ್ರಿ: ‘ಅವನೊಬ್ಬ ಅಯೋಗ್ಯ ಮಂತ್ರಿ ಜಮೀರ್ ರಾಜ್ಯದ ತುಂಬಾ ಓಡಾಡು
ತ್ತಿದ್ದಾನೆ. ಜಮೀನುಗಳಿಗೆ ವಕ್ಫ್ ಎಂದು ಹೇಳಿ ರೈತರಿಗೆ ನೋಟಿಸ್ ಕೊಡಿಸುತ್ತಿರುವ ಆತ ಪುಡಾರಿ’ ಎಂದು ಏಕವಚನದಲ್ಲಿ ಟೀಕಿಸಿದರು.
‘ದೇವಸ್ಥಾನ, ಮಠ ಮಾನ್ಯಗಳಿಗೂ ನೋಟಿಸ್ ಕೊಡಲು ಹೇಳುತ್ತಿದ್ದಾನೆ. ಇಲ್ಲವಾದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಸುತ್ತಿದ್ದಾನೆ’