Breaking News

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು. ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

Spread the love

ಹಾಪುರ: ಶನಿವಾರ(ನ.2) ಸಂಜೆ ತಾಲೂಕಿನ ದೋರನಹಳ್ಳಿ ಗ್ರಾಮ ಬಳಿ ಶಹಾಪುರ – ಯಾದಗಿರಿ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವನ ಕಗ್ಗೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿ ತಾಲೂಕಿನ ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಕ ತಾಂಡಾದ ನಿವಾಸಿ ತಿಪ್ಪಣ್ಣ ರಾಠೋಡ್(35) ಎಂದು ಗುರುತಿಸಲಾಗಿದೆ.

ಆರೋಪಿಗಳು ಅದೇ ಜಾಪಾ ನಾಯಕ ತಾಂಡಾದ ನಿವಾಸಿಗಳಾಗಿದ್ದು, ಕುಮಾರ (36) ಹೇಮ್ಯಾ ಚವ್ಹಾಣ (36) ಹಾಗೂ ಲಕ್ಷ್ಮಣ ಚವ್ಹಾಣ (38) ಇವರೇ ಆರೋಪಿಗಳೆಂದು ಹೇಳಲಾಗಿದೆ.

ಹತ್ಯೆಯಾದ ತಿಪ್ಪಣ್ಣ ಅವರ ಪತ್ನಿ ಮಂಜುಳಾ ನಗರ ಠಾಣೆಗೆ ನೀಡಿದ ದೂರಿನನ್ವಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳ ವೃತ್ತಿ ಕಳ್ಳತನವಾಗಿದ್ದು, ಲಿಂಗಸೂಗೂರಿನಲ್ಲಿ ಕಳ್ಳತನ ಮಾಡಿ ತಾಂಡಾದಲ್ಲಿ ಭೂಗತವಾಗಿದ್ದ ಆರೋಪಿಗಳ ಬಗ್ಗೆ ಲಿಂಗಸೂಗೂರ ಪೊಲೀಸರಿಗೆ ಹತ್ಯೆಗೊಳಗಾದ ವ್ಯಕ್ತಿ ತಿಪ್ಪಣ್ಣ ರಾಠೋಡ್ ಮಾಹಿತಿ ನೀಡಿರುವ ಹಿನ್ನೆಲೆ ಆರೋಪಿಗಳು ಜೈಲು ಪಾಲಾಗಿದ್ದರು.

ಈಚೆಗೆ ಜೈಲಿನಿಂದ ಹೊರ ಬಂದ ಆರೋಪಿಗಳೇ ತಿಪ್ಪಣ್ಣನ ಮನೆಗೆ ತೆರಳಿ ವಾರ್ನಿಂಗ್ ಮಾಡಿದ್ದರಂತೆ, ಆಗ ಅಕ್ಕಪಕ್ಕ ತಾಂಡಾದ ಜನರು ಬುದ್ಧಿ ಹೇಳಿ ಗಲಾಟೆ ಬಿಡಿಸಿದ್ದರಂತೆ, ಆಗಲೇ ಆರೋಪಿಗಳು ನೀನು ಭೂಮಿ ಮೇಲೆ ಇದ್ದರೇತಾನೆ.? ಎಂದು ಬೆದರಿಕೆವೊಡ್ಡಿದ್ದರಂತೆ, ಹೀಗಾಗಿ ತನ್ನ ಪತಿಗೆ ಕಾಲ್ ಮಾಡಿ ಕರೆದು ಕುಡಿಸಿ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರದಿಂದ ಅಂದರೆ ಮೊನಚಾದ ಅಸ್ತ್ರ, ಮಚ್ಚು ಅಥವಾ ಲಾಂಗ್‍ನಿಂದ ಪತಿ ಮೇಲೆ ಹಲ್ಲೆ ನಡೆಸುವ ಮೂಲಕ ಕೊಂದು ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕೆಂದು ಪತ್ನಿ ಮಂಜುಳಾ ತಿಪ್ಪಣ್ಣ ರಾಠೋಡ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.


Spread the love

About Laxminews 24x7

Check Also

ತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು

Spread the loveತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ