Breaking News

30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Spread the love

ಮುಂಬಯಿ: ರೀ- ರಿಲೀಸ್‌ ಟ್ರೆಂಡ್‌ಗೆ ಬಾಲಿವುಡ್‌ನ (Bollywood) ಎವರ್‌ ಗ್ರೀನ್‌ ಸೂಪರ್‌ ಹಿಟ್‌ ಸಿನಿಮಾ ʼಕರಣ್‌ ಅರ್ಜುನ್‌ʼ (Karan Arjun) ಸೇರಿದೆ.

ಸಲ್ಮಾನ್‌ ಖಾನ್‌ (Salman Khan), ಶಾರುಖ್‌ ಖಾನ್‌ (Shah Rukh Khan) ಜತೆಯಾಗಿ ನಟಿಸಿದ್ದ, ರಾಕೇಶ್‌ ರೋಷನ್‌ ನಿರ್ದೇಶನ (Rakesh Roshan) ಮಾಡಿದ್ದ ʼಕರಣ್‌ ಅರ್ಜುನ್ʼ ಸಿನಿಮಾ ಮತ್ತೆ ಥಿಯೇಟರ್‌ನಲ್ಲಿ ತೆರೆ ಕಾಣಲಿದೆ.

 

1995ರ ಜನವರಿಯಲ್ಲಿ ತೆರೆಗೆ ಬಂದಿದ್ದ ʼಕರಣ್‌ ಅರ್ಜುನ್‌ʼ ಆ ಕಾಲದಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಹಿಟ್‌ ಆಗಿತ್ತು, ಸಿನಿಮಾದಲ್ಲಿನ ಕಥೆ, ಹಾಡು, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಫ್ಯಾಮಿಲಿ ಡ್ರಾಮಾ ʼಕರಣ್‌ ಅರ್ಜುನ್‌ʼ ಸಖತ್‌ ಸದ್ದು ಮಾಡಿತ್ತು.

“ಮೇರೆ ಕರಣ್ ಅರ್ಜುನ್ ಆಯೇಂಗೆ..” ಎನ್ನುವ ಡೈಲಾಗ್ ಇಂದಿಗೂ ಬಾಲಿವುಡ್‌ನಲ್ಲಿ ಎವರ್‌ ಗ್ರೀನ್‌ ಆಗಿದೆ. ಸಹೋದರರಾಗಿ ಸಲ್ಮಾನ್‌ , ಶಾರುಖ್‌ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಹೋದರತ್ವ ಹಾಗೂ ತಾಯಿ ಬಾಂಧವ್ಯದ ಸುತ್ತ ಸಾಗಿದ ʼಕರಣ್‌ ಅರ್ಜುನ್‌ʼ 30 ವರ್ಷಗಳ ಬಳಿಕ ಮತ್ತೆ ವರ್ಲ್ಡ್‌ವೈಡ್‌ ಥಿಯೇಟರ್‌ಗಳಲ್ಲಿ ತೆರೆಗೆ ಬರಲಿದೆ.

 

 

 

ಇದೇ ನವೆಂಬರ್ 22 ರಂದು ʼಕರಣ್‌ ಅರ್ಜುನ್‌ʼ ಗ್ಲೋಬಲ್‌ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ರಾಕೇಶ್‌ ರೋಷನ್‌ ಸಿನಿಮಾದ ತುಣುಕವೊಂದನ್ನು ಹಂಚಿಕೊಂಡು ತಿಳಿಸಿದ್ದಾರೆ.


Spread the love

About Laxminews 24x7

Check Also

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

Spread the loveಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ