ಬಾಗಲಕೋಟೆ: ಮಹಲಿಂಗಪುರ ಸದಸ್ಯೆ ತಳ್ಳಾಟ ನೂಕಾಟದಿಂದ ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯ ಪರಿಣಾಮ ಅವರಿಗೆ ಗರ್ಭಪಾತವಾಗಿದೆ. ಸಿಎಂಗೆ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಶಾಸಕ ಮತ್ತು ಬೆಂಬಲಿಗರ ತಳ್ಳಾಟದಿಂದಾಗಿ ಪುರಸಭೆ ಸದಸ್ಯೆಗೆ ಗರ್ಭಪಾತ ವಿಚಾರವಾಗಿ ಮಾತನಾಡಿದ ಉಮಾಶ್ರೀ, ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ. ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಈ ಘಟನೆಯಲ್ಲಿ ಇದ್ದ ನೀಚ ಶಾಸಕರನ್ನು ಸರ್ಕಾರ ಪಕ್ಷದಿಂದ ಹೊರಗಿಡಬೇಕು. ಸರ್ಕಾರ ಅಪರಾಧಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
