ಬೆಂಗಳೂರು: ಅಬಕಾರಿ ಸಚಿವರನ್ನೇ ಬದಲಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿರುವ ಮದ್ಯದಂಗಡಿ ಮಾಲೀಕರು, ಇಲಾಖೆಯಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ನ.20ರಿಂದ ಅಂಗಡಿಗಳನ್ನು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ, ಅಬಕಾರಿ ಇಲಾಖೆಯಲ್ಲಿ ಲಂಚಾವತಾರಕ್ಕೆ ಎಲ್ಲೆ ಮೀರಿದ್ದು, ಸನ್ನದುದಾರರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ವಸೂಲಿ ಮಾಡುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿ ಸಿಎಂ, ಸಚಿವರ ನಿವಾಸ ಹಾಗೂ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ವಿವಿಧ ಬೇಡಿಕೆಗಳನ್ನು ನ.20ರೊಳಗೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಒಟ್ಟಾಗಿದ್ದರೆ ಅಧಿಕಾರಿಗಳಿಗೆ ಬುದ್ಧಿ ಕಲಿಸುವ ಜತೆಗೆ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಪ್ರತಿ ನಿತ್ಯ ಸರ್ಕಾರಕ್ಕೆ ಬರುತ್ತಿರುವ 125 ಕೋಟಿ ರೂ. ಆದಾಯ ಸ್ಥಗಿತವಾದರೆ ನಮ್ಮ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.
ಇಲಾಖೆ ಮಂತ್ರಿ ವಿರುದ್ಧ ಆರೋಪ
ಸಚಿವರನ್ನು ಬದಲಾಯಿಸಿ ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಿಕೊಳ್ಳಬೇಕು ಎಂದು ಸಂದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆ ಹಾಗೂ ಬಡ್ತಿಗೆ ಸಚಿವರು ಲಂಚ ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಅಧಿಕಾರಿಗಳು ಮನಬಂದಂತೆ ಸನ್ನದುದಾರರಿಂದ ಲಂಚ ವಸೂಲಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ನಕಲಿ, ಅಂತಾರಾಜ್ಯ ಮದ್ಯಗಳು ಹೆಚ್ಚಿವೆ. ಇಲಾಖೆಯ ಜಾರಿನಿರ್ದೇಶನಾಲಯ ವಿಭಾಗ ಇದನ್ನು ತಡೆಯಲು ವಿಲವಾಗಿದೆ. ಇದರಿಂದಾಗಿ ವರಮಾನ ಕುಂಠಿತವಾಗುತ್ತಿದೆ. ಸಿಎಂ ಭೇಟಿಗೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸಿ ಆಕ್ರೋಶ:
ಸುದ್ದಿಗೋಷ್ಠಿ ಮುನ್ನ ‘ಸ್ವಚ್ಛ ಅಬಕಾರಿ ಅಭಿಯಾನ’ ಅಡಿ ಬೆಂಗಳೂರಿನ ಸ್ವಾತಂತ್ರ$್ಯ ಉದ್ಯಾನದಲ್ಲಿ ಮದ್ಯದಂಗಡಿ ಮಾಲೀಕರು ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಮೂಲೆಯಿಂದ ಸಾವಿರಾರು ಮಾಲೀಕರು ಆಗಮಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಬಕಾರಿ ಆಯುಕ್ತ ಮೋಹನ್ ಕುಮಾರ್, ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಅಮಾನತುಗೊಂಡ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡಬಾರದು. 3 ವರ್ಷ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಸನ್ನದುದಾರರ ಜತೆ ದುವರ್ತನೆ ತೋರುತ್ತಿರುವ ಕೊಪ್ಪಳ, ಕೋಲಾರ, ವಿಜಯಪುರದ ಅಬಕಾರಿ ನಿರೀಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿಲ್ಲರೆ ಮದ್ಯಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು. ಹೆಚ್ಚುವರಿ ಅಬಕಾರಿ ಶುಲ್ಕ ಇಳಿಸಬೇಕು. 3&4 ದಿನ ಸರ್ಕಾರಿ ರಜೆ ಇರುವ ದಿನಗಳಿಂದು ಕೆಎಸ್ಬಿಸಿಎಲ್ನವರು ಟಿಓಡಿ ರೀತಿಯಲ್ಲಿ ಮದ್ಯ/ಬಿಯರ್ ಒದಗಿಸಬೇಕು.
| ಕರುಣಾಕರ ಹೆಗ್ಡೆ. ಬೆಂಗಳೂರು ವಿಭಾಗೀಯ ಅಧ್ಯಕ್ಷ