ಬೆಂಗಳೂರು, ಅಕ್ಟೋಬರ್ 27: ಬೆಳಕಿನ ಹಬ್ಬ ದೀಪಾವಳಿ ಹಬ್ಬದಾಚರಣೆಗೆ ರಾಜ್ಯಾದ್ಯಂತ ಭರ್ಜರಿ ತಯಾರಿ ನಡೆದಿದೆ. ಹಬ್ಬಕ್ಕೆ ಉದ್ಯೋಗ ಸ್ಥಳದಿಂದ ತಮ್ಮೂರಿಗೆ ತೆರಳುವವರಿಗೆ ಅನುಕೂಲವಾಗಲೆಂದು ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ.
ಹಾಗಾದರೆ ಯಾವ ದಿನಾಂಕದಂದು ಬಸ್‌ಗಳ ಲಭ್ಯತೆ, ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಇದೇ ಅಕ್ಟೊಬರ್ 31 ರಂದು ನರಕ ಚತುರ್ದಶಿ ಇದೆ. ಮರದುನ ನವೆಂಬರ್ 01ಕ್ಕೆ ಕನ್ನಡ ರಾಜ್ಯೋತ್ಸವದಂದು ಬಲಿಪಾಡ್ಯಮಿ ಹಬ್ಬ ಇದೆ. ಹೀಗಾಗಿ ನವೆಂಬರ್ 02ವರೆಗೆ ಸಾರ್ವಜನಿಕ ಓಡಾಟ ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೊಬರ್ 30ರಿಂದ ನವೆಂಬರ್ 1ರವರೆಗೆ ಹಾಗೂ ನಂತರ ನೆವೆಂಬರ್ 2ರಿಂದ ನವೆಂಬರ್ 4ರವರೆಗೆ ಕೆಎಸ್‌ಆರ್‌ಟಿಸಿಯ 2000 ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ.
ಈ ವಿಶೇಷ ಸಾರಿಗೆ ಬಸ್‌ಗಳು ನವೆಂಬರ್ 03.11.2024 ಮತ್ತು 04.11.2024 ರಂದು ರಾಜ್ಯ ಮತ್ತು ಹೊರ ರಾಜ್ಯಗಳಿಂದ ರಾಜಧಾನಿ ಬೆಂಗಳೂರಿಗೆ ಬರಲಿವೆ ಎಂದು ನಿಗಮದ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.