ಮುಂಬೈ: ಬಾಲಿವುಡ್ನ ದೃಶ್ಯಂ ಸಿನಿಮಾದಿಂದ ಪ್ರೇರಿತನಾಗಿ ಕೊಲೆ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರ(Maharastra)ದಲ್ಲಿ ಬೆಳಕಿಗೆ ಬಂದಿದೆ. ತನ್ನ ಗೆಳತಿಯನ್ನು ಕೊಂದು ಸಮಾಧಿ ಮಾಡಿದ ನಂತರ ಆಕೆಯ ದೇಹವನ್ನು ಸಿಮೆಂಟ್‌ನಿಂದ ಮುಚ್ಚಿದ ಆರೋಪದ ಮೇಲೆ ಸೇನಾ ಯೋಧನನ್ನು ಬಂಧಿಸಲಾಗಿದೆ.
ಆರೋಪಿ 33 ವರ್ಷದ ಅಜಯ್ ವಾಂಖೆಡೆ ಮತ್ತು ಜ್ಯೋತ್ಸ್ನಾ ಆಕ್ರೆ ಮದುವೆಯ ಪೋರ್ಟಲ್ ಮೂಲಕ ಪರಿಚಿತರಾದರು. ಅಜಯ್ ವಾಂಖೆಡೆ ನಾಗಾಲ್ಯಾಂಡ್‌ನ ನಾಗ್ಪುರದ ಕೈಲಾಶ್ ನಗರ ಪ್ರದೇಶದ ನಿವಾಸಿಯಾಗಿದ್ದಾರೆ. ಜ್ಯೋತ್ಸ್ನಾ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪೋರ್ಟಲ್ ಮೂಲಕ ಭೇಟಿಯಾದ ಇವರ ಸ್ನೇಹವು ನಂತರ ಪ್ರೇಮಕ್ಕೆ ತಿರುಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಅಜಯ್‌ನ ಕುಟುಂಬವು ಇವರಿಬ್ಬರ ಮದುವೆಯನ್ನು ನಿರಾಕರಿಸಿ, ಆತನಿಗೆ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯನ್ನು ಮಾಡಿದ್ದಾರೆ. ಬಳಿಕ ಇವರಿಬ್ಬರ ನಡುವಿನ ಪರಿಚಯವು ಹದಗೆಟ್ಟಿದೆ. ಅಜಯ್ ಮದುವೆಯಾದ ಬಳಿಕ ಜ್ಯೋತ್ಸ್ನಾಳನ್ನು ಕಡೆಗಣಿಸಲು ಪ್ರಾರಂಭಿಸಿದ್ದಾನೆ, ಆಕೆಯಿಂದ ಎದುರಾಗುವ ಸಮಸ್ಯೆಯನ್ನು ದೂರವಾಗಿಲು ಆತ ಕೊಲೆಗೆ ಯೋಜನೆ ರೂಪಿಸಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.