Breaking News

New Zealand ವಿರುದ್ಧ ಟೆಸ್ಟ್‌ : ಟೀಮ್ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಸೇರ್ಪಡೆ

Spread the love

ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡಕ್ಕೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ರವಿವಾರ(ಅ 20) ಸೇರ್ಪಡೆಯಾಗಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಎಂಟು ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಕೂಡಲೇ ಆಯ್ಕೆಗಾರರು ವಾಷಿಂಗ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

 

ವಾಷಿಂಗ್ಟನ್ ಸುಂದರ್ ಅವರು ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ಪುಣೆಯಲ್ಲಿ ತಂಡದೊಂದಿಗೆ ಸೇರಿಕೊಳ್ಳುತ್ತಾರೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ತಮಿಳುನಾಡು ಪರ 152 ರನ್ ಗಳಿಸಿದ ನಂತರ 25 ರ ಹರೆಯದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.ಜನವರಿ 2021 ರಲ್ಲಿ ಗಾಬಾದಲ್ಲಿ ಆಸ್ಟ್ರೇಲಿಯ ವಿರುದ್ಧದ ಭಾರತದ ಐತಿಹಾಸಿಕ ಗೆಲುವಿನಲ್ಲಿ ವಾಷಿಂಗ್ಟನ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆ ಪಂದ್ಯವು ಅವರ ಟೆಸ್ಟ್ ಚೊಚ್ಚಲ ಪಂದ್ಯವಾಗಿತ್ತು. ನಾಲ್ಕು ಟೆಸ್ಟ್, 22 ಏಕದಿನ ಮತ್ತು 52 ಟಿ 20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ವಾಷಿಂಗ್ಟನ್ ಸುಂದರ್ ಹೊಂದಿದ್ದಾರೆ.


Spread the love

About Laxminews 24x7

Check Also

ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ

Spread the love ಚಿಕ್ಕೋಡಿ : ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ ರಾಯಬಾಗ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ