Breaking News

ಎಚ್‌ಐವಿ ತಡೆಗಟ್ಟುವಿಕೆ ಜಾಗೃತಿಗಾಗಿ ಮ್ಯಾರಥಾನ್

Spread the love

ಬೆಳಗಾವಿ: ಎಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನಗರದಲ್ಲಿ ಶನಿವಾರ ‘ರೆಡ್ ರನ್’ ರಾಜ್ಯಮಟ್ಟದ 5 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಓಟ ಕೃಷ್ಣದೇವರಾಯ ವೃತ್ತ, ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಸಾಗಿ, ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.

ಬೆಳಗಾವಿ: ಎಚ್‌ಐವಿ ತಡೆಗಟ್ಟುವಿಕೆ ಜಾಗೃತಿಗಾಗಿ ಮ್ಯಾರಥಾನ್

ರಾಜ್ಯ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಹೆಚ್ಚುವರಿ ಯೋಜನಾ ನಿರ್ದೇಶಕಿ ಡಾ.ಉಮಾ ಬುಗ್ಗಿ ಸ್ಪರ್ಧೆಗೆ ಚಾಲನೆ ನೀಡಿದರು.

ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಾದ ವೈಭವ ಪಾಟೀಲ, ಪ್ರಣತಿ ರೇವಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೆ. ಚೇತನ ಕೋಲಾರ, ಎಚ್.ಎಂ.ಹರ್ಷಿತಾ ದ್ವಿತೀಯ ಹಾಗೂ ವೆಂಕಟೇಶ ಕೆ.ಕೆ., ನಂದಿನಿ ತೃತೀಯ ಸ್ಥಾನ ಗಳಿಸಿದರು.

ಬಿಮ್ಸ್‌ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ.ಎಂ.ಎಸ್.ಪಲ್ಲೇದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ವಿ.ಶಿಂಧೆ, ನಂಜೇಗೌಡ, ಡಾ.ರಾಜೇಶ್ವರಿ ಪಾಟೀಲ, ಗಿರೀಶ ಬುಡರಕಟ್ಟಿ, ಡಾ.ಆರ್.ಜಿ.ಪಾಟೀಲ, ಡಾ.ಬಿ.ಎನ್.ತುಕ್ಕಾರ ಇದ್ದರು.


Spread the love

About Laxminews 24x7

Check Also

ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿದ ಸಚಿವ ಕೆ.ಜೆ. ಜಾರ್ಜ್

Spread the loveಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯಾದ್ಯಂತ ಶೋಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ